ಒನ್ ವೇನಲ್ಲಿ ಬಂದು ಬೈಕ್’ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಣ ಇಬ್ಬರು ಹೋಟೆಲ್ ಕೆಲಸಗಾರರು ಸಾವನ್ನಪ್ಪಿರುವ ಘಟನೆ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು: ಒನ್ ವೇನಲ್ಲಿ ಬಂದು ಬೈಕ್’ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಣ ಇಬ್ಬರು ಹೋಟೆಲ್ ಕೆಲಸಗಾರರು ಸಾವನ್ನಪ್ಪಿರುವ ಘಟನೆ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ತಮಿಳುನಾಡಿನ ವೆಲ್ಲೂರು ಮೂಲದ ಯೂಸುಫ್ ಖಾನ್ ಮತ್ತು ನೇಪಾಳದ ಪ್ರಜೆ ಪರೇಶ್ ಎಂದು ಗುರುತಿಸಲಾಗಿದೆ.
ಇಬ್ಬರೂ 19 ವರ್ಷ ವಯಸ್ಸಿನವರಾಗಿದ್ದು, ಪುಲಿಕೇಶಿ ನಗರದ ಎಂಎಂ ರಸ್ತೆಯಲ್ಲಿರುವ ಗ್ರ್ಯಾಂಡ್ ಹೈದರಾಬಾದ್ ಬಿರಿಯಾನಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಯೂಸುಫ್ ಮತ್ತು ಪರೇಶ್ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾಜರ್ ರಸ್ತೆಯಲ್ಲಿ ಒನ್ ವೇ ಅಲ್ಲಿ ಬಂದ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್ ನಿಂದ ಸವಾರರು ಕೆಳಗೆ ಬೀಳುತ್ತಿದ್ದಂತೆಯೇ ಟಿಪ್ಪರ್ ಲಾರಿ ಇಬ್ಬರ ಮೇಲೆ ಹರಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಾಲಕ ಸುನೀಲ್ ಬಾಬು ರಾಥೋಡ್ (23) ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.