Home Uncategorized ಕಟ್ಟಡ ನಿರ್ಮಾಣ ಕಂಪನಿಗೆ ಬಿಬಿಎಂಪಿಯಿಂದ 50,000 ರೂಪಾಯಿ ದಂಡ

ಕಟ್ಟಡ ನಿರ್ಮಾಣ ಕಂಪನಿಗೆ ಬಿಬಿಎಂಪಿಯಿಂದ 50,000 ರೂಪಾಯಿ ದಂಡ

4
0
Advertisement
bengaluru

ರಸ್ತೆ ಬದಿಯಲ್ಲಿ ಫ್ಲೆಕ್ಸ್ ಹಾಕಿದ್ದಕ್ಕಾಗಿ ಕಟ್ಟಡ ನಿರ್ಮಾಣ ಸಂಸ್ಥೆ ಕ್ಯಾಸಾ ಗ್ರ್ಯಾಂಡ್ ಗೆ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿದೆ.  ಬೆಂಗಳೂರು: ರಸ್ತೆ ಬದಿಯಲ್ಲಿ ಫ್ಲೆಕ್ಸ್ ಹಾಕಿದ್ದಕ್ಕಾಗಿ ಕಟ್ಟಡ ನಿರ್ಮಾಣ ಸಂಸ್ಥೆ ಕ್ಯಾಸಾ ಗ್ರ್ಯಾಂಡ್ ಗೆ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿದೆ. 

ಕ್ಯಾಸಾ ಗ್ರ್ಯಾಂಡ್ ಸಂಸ್ಥೆ ರಾಜರಾಜೇಶ್ವರಿ ನಗರದ ತಲಘಟ್ಟಪುರದ ರಸ್ತೆ ಬದಿಯಲ್ಲಿ ಫ್ಲೆಕ್ಸ್ ನ್ನು ಹಾಕಿತ್ತು.

ಸಂಸ್ಥೆ ತನ್ನ ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿದ ಜಾಹಿರಾತನ್ನು ಫ್ಲೆಕ್ಸ್ ನಲ್ಲಿ ಹಾಕಿತ್ತು. ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಪೂರ್ಣಿಮ ಹಾಗೂ ಮೋತಿಹಾಲ್ ಚೌಹಾಣ್, ವಾರ್ಡ್ ಮಾರ್ಷಲ್ ಸೇರಿದಂತೆ ಇತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆರ್ ಆರ್ ನಗರ ಜೋನ್ ನ ಅಧೀಕ್ಷಕ ಇಂಜಿನಿಯರ್ ನಂದೀಶ ಜೆಆರ್ ನಿರ್ದೇಶನದ ಪ್ರಕಾರ ವಲಯ ಆಯುಕ್ತರು,  ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕದಂತೆ ಎಚ್ಚರ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ
ಕ್ಯಾಸಾ ಗ್ರ್ಯಾಂಡ್ ಸಂಸ್ಥೆ ನಿಯಮ ಉಲ್ಲಂಘನೆ ಮಾಡಿ ಫ್ಲೆಕ್ಸ್ ಹಾಕಿತ್ತು. ಇದಕ್ಕೂ ಮುನ್ನ ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳು ಫ್ಲೆಕ್ಸ್ ವಿಚಾರವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಗೆ 50,000 ರೂಪಾಯಿಗಳ ದಂಡ ವಿಧಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಖಾತೆಯಿಂದ ದಂಡ ಪಾವತಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here