ಬೆಂಗಳೂರು:
ಕನ್ನಡದ ಬಗೆಗಿನ ಸರ್ಕಾರದ ಬದ್ಧತೆ,ಸಂಕಲ್ಪಗಳನ್ನು ಕೊರೋನಾ ಕಸಿಯಲು ಅಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ನಗರದ ಕಂಠೀರಣ ಕ್ರೀಡಾಂಗಣದಲ್ಲಿ ನಡೆದ 65ನೇ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ನಾಡು ಹಾಗೆಯೇ ನಮ್ಮ ಕಸ್ತೂರಿ ನುಡಿ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ.ನಮ್ಮ ಭಾಷೆ ಅತ್ಯಂತ ಶ್ರೀಮಂತ,ಸಮೃದ್ಧ ಹಾಗೆಯೇ ಅತ್ಯಂತ ಗಟ್ಟಿತನ ದಿಂದ ಕೂಡಿದ ಭಾಷೆ. 2500 ಕ್ಕೂ ಹೆಚ್ಚು ವರ್ಷಗಳ ಹಿನ್ನೆಲೆ ನಮ್ಮ ಭಾಷೆಯದು ಎಂಬುದು ನಮ್ಮ ಹೆಮ್ಮೆ.ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿರುವುದು ನಮ್ಮ ಭಾಷೆಯ ಸಮೃದ್ಧ ಹಿನ್ನೆಲೆಗೆ ಸಾಕ್ಷಿ ಯಾಗಿದೆ.ನಾವು ನಮ್ಮ ಭಾಷೆಯ ನ್ನು ಶಿಕ್ಷಣ ಸೇರಿದಂತೆ ನಮ್ಮ ದೈನಂದಿನ ಎಲ್ಲ ವ್ಯವಹಾರಗಳಲ್ಲಿಯೂ ಬಳಸುವ ಮೂಲಕ ನಾವು ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕು.ನಮ್ಮ ಭಾಷೆ ಉಳಿದರೆ ನಾವು ಉಳಿ ಯುತ್ತೇವೆ.ಹಾಗಾಗಿ ಕನ್ನಡದ ಹೊರತಾ ಗಿ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಸಾಧ್ಯವಾಗದ ಮಾತು ಎಂದರು.