ರಾಯಚೂರು:
ಆ ದೇಶದಲ್ಲಿನ ಕಲೆ,ಸಾಹಿತ್ಯ,ಸಂಸ್ಕೃತಿ ಎಷ್ಟೊಂದು ಗಟ್ಟಿಯಾಗಿದೆ ಎಂಬ ಆಧಾರದ ಮೇಲೆ ಆ ದೇಶ ಎಷ್ಟು ಶ್ರೀಮಂತವಾಗಿದೆ ಎಂದು ಗಮನಿಸುವಂತಾದರೆ ಅದು ಅರ್ಥಪೂರ್ಣವಾಗು ತ್ತದೆ. ಏಕೆಂದರೆ ಇಂದು ಎಷ್ಟೋ ಶ್ರೀಮಂತ ರಾಷ್ಟ್ರಗಳಲ್ಲಿ ಸಂಸ್ಕೃತಿ,ಮಾನವೀಯ ತೆಯಂತಹ ಉದಾತ್ತ ಗುಣ ಗಳ ಕೊರತೆಯಾಗಿ ಆ ದೇಶಗಳ ಸಾರ್ವಜನಿಕರ ಬದುಕಿನಲ್ಲಿ ಖಿನ್ನತೆ (ಡಿಪ್ರೆಷನ್) ಹೆಚ್ಚಾಗುತ್ತಿದ ಎಂದು ಡಿಸಿ ಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹರಣೆ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು,ಮಾನವೀಯ ಸಂಬಂಧ ಕಡಿಮೆಯಾಗುತ್ತಿದೆ ಎಂಬುದನ್ನು ಮನಃ ಶಾಸ್ತ್ರಜ್ಞರು ಸಂಶೋಧಿಸಿದ್ದಾರೆ.ಆದರೆ ನಾವು ಸುದೈವಿಗಳು.ನಮ್ಮ ರಾಷ್ಟ್ರವು ಸಂಸ್ಕೃತಿ ಮತ್ತು ಕಲೆಗಳಲ್ಲಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ.ಇದನ್ನು ಅನೇಕ ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೇ ಮನದಟ್ಟು ಮಾಡಿ ಕೊಟ್ಟಿದ್ದರು.ಆದ್ದರಿಂದ ನಮ್ಮ ಬದುಕಿನಲ್ಲಿ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ನಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ಮಹತ್ವ ಸಿಗುವುದು ಸಾಧ್ಯ.ನಮ್ಮಲ್ಲಿ ಉತ್ತಮ ಸಂಸ್ಕೃತಿಯ ಬಂಧ ಗಟ್ಟಿಯಾಗಿರುವುದರಿಂ ದಲೇ ಮಾನವೀಯ ಸಂಬಂಧಗಳೂ ಅತ್ಯಂತ ಜೀವಂತವಾಗಿವೆ.ಇದು ಸುಖೀ ಕುಟುಂಬಕ್ಕೆ ಅಗತ್ಯವಾದ ಅಂಶ ವಾಗಿದೆ ಎಂದು ಅವರು ತಿಳಿಸಿದರು.