ಬೆಂಗಳೂರು:
ವಿಧಾನಸಭೆಯ ಉಪ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ನೀಡಿದ್ದು, ವಿದ್ಯುತ್ ದರ ಹೆಚ್ಚಳ ಮಾಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಪರಿಷ್ಕೃತ ದರ ನವೆಂಬರ್ 1ರಿಂದಲೇ ಅನ್ವಯವಾಗುವಂತೆ ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಕಳದೆ ಮಾರ್ಚ್ ನಲ್ಲೇ ಹೊಸ ಹೊಸ ದರ ಪ್ರಕಟವಾಗಬೇಕಿತ್ತು ಆಯೋಗ ಪ್ರತಿ ಯೂನಿಟ್ ಗೆ 196 ಪೈಸೆ ಹೆಚ್ಚಳ ಮಾಡುವ ಪ್ರಸ್ತಾಪ ಮಾಡಿತ್ತು ಸರ್ಕಾರ ಅಂತಿಮವಾಗಿ 40 ಪೈಸೆ ಹೆಚ್ಚಳಕ್ಕೆ ಸಮ್ಮತಿ ನೀಡಿದೆ.
ಕೊರೋನಾ ಮತ್ತು ಆರ್ ಆರ್ ನಗರ, ಶಿರಾ ಉಪ ಚುನಾವಣೆ ಕಾರಣದಿಂದ ತಡೆಹಿಡಿಯಲಾಗಿದ್ದ ದರ ಹೆಚ್ಚಳ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.ಪ್ರತಿಬಾರಿ ಏಪ್ರಿಲ್ ತಿಂಗಳಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕೊರೋನಾ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ ಇದೀಗ ಕರೊನಾ ಸೋಂಕು ಕಡಿಮೆಯಾಗುತ್ತಿದ್ದು, ವಿದ್ಯುತ್ ಸರಬರಾಜು ನಿಗಮಗಳ ಆಥಿರ್ಕ ಹೊರೆ ಹೆಚ್ಚುತ್ತಿರುವ ಕಾರಣ ದರ ಪರಿಷ್ಕರಣೆ ಮಾಡಲಾಗಿದೆ ಎಂಬ ವಾದವನ್ನು ಮುಂದಿಡಲಾಗಿದೆ.