Home ಅಪರಾಧ ಕರ್ತವ್ಯದಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ; ಆರೋಪಿ ಸೆರೆ

ಕರ್ತವ್ಯದಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ; ಆರೋಪಿ ಸೆರೆ

42
0

ಬೆಂಗಳೂರು:

ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದುದನ್ನು ಪ್ರಶ್ನಿಸಿದ್ದಕ್ಕೆ ರಾಡ್ನಿಂದ ಸಬ್ ಇನ್ಸ್ ಪೆಕ್ಟರ್-ಪಿಎಸ್ಐ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಾಡಹಗಲೇ ಯಶವಂತಪುರದ ಬಳಿ ನಡೆದಿದೆ.

ಶ್ರೀರಾಮಪುರ ಪೊಲೀಸ್ ಠಾಣೆಯ ತರಬೇತಿ ನಿರತ –ಪ್ರೊಬೇಷನರಿ ಪಿಎಸ್ಐ ಶರ್ಫುದ್ದೀನ್ ಹಲ್ಲೆಗೊಳಗಾದವರು. ಹಲ್ಲೆ ಮಾಡಿದ ಬೈಕ್ ಸವಾರ ಉದಯ್ ಕುಮಾರ್‌ನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ‌ ಎಂದು‌ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಪಿಎಸ್ಐ ಶರ್ಫುದ್ದೀನ್ ಯಶವಂತಪುರದಲ್ಲಿ ಕರ್ತವ್ಯದಲ್ಲಿದ್ದಾಗ ಅವರ ಬೈಕ್‌ ಗೆ ಸ್ಕೂಟಿಯಲ್ಲಿ ಬರುತ್ತಿದ್ದ ಆರೋಪಿ ಉದಯ್‌ ಕುಮಾರ್‌‌ ಆರ್ ಟಿ ಓಕ್ ಚೇರಿಯ ಶಿವಣ್ಣ ಹೋಟೆಲ್ ಬಳಿ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಪಿಎಸ್ಐ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಲ್ಲು ಹಾಗೂ ರಾಡ್‌ಗಳಿಂದ ಉದಯ ಕುಮಾರ್ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಪರಿಣಾಮ ಪಿಎಸ್ಐ ತಲೆ ಹಾಗೂ‌ ಮುಖದ ಭಾಗ ತರಚಿದ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here