Home Uncategorized ಕರ್ನಾಕಟದಲ್ಲೂ ಒಮಿಕ್ರಾನ್ BF.7 ಭೀತಿ: ವಿದೇಶದಿಂದ ಬೆಂಗಳೂರಿಗೆ ಬಂದ 7 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು

ಕರ್ನಾಕಟದಲ್ಲೂ ಒಮಿಕ್ರಾನ್ BF.7 ಭೀತಿ: ವಿದೇಶದಿಂದ ಬೆಂಗಳೂರಿಗೆ ಬಂದ 7 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು

0
0
bengaluru

ಚೀನಾದಲ್ಲಿ ವ್ಯಾಪಕವಾಗಿ ಅಬ್ಬರಿಸುತ್ತಿರುವ ಕೋವಿಡ್-19 ರೂಪಾಂತರ ಸೋಂಕು ಒಮಿಕ್ರಾನ್ BF.7 ಭೀತಿ ನಡುವೆಯೇ ಇಂದು ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರ ಪೈಕಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಚೀನಾದಲ್ಲಿ ವ್ಯಾಪಕವಾಗಿ ಅಬ್ಬರಿಸುತ್ತಿರುವ ಕೋವಿಡ್-19 ರೂಪಾಂತರ ಸೋಂಕು ಒಮಿಕ್ರಾನ್ BF.7 ಭೀತಿ ನಡುವೆಯೇ ಇಂದು ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರ ಪೈಕಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಚೀನಾದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಅದರಂತೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಚ್ರೀಯ ವಿಮಾನ ನಿಲ್ದಾಣಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಬಂದಿಳಿದಿದ್ದ ಪ್ರಯಾಣಿಕರ ಪೈಕಿ 7 ಮಂದಿಯ ಆರ್ ಟಿಪಿಸಿಆರ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದು ಇದು ಒಮಿಕ್ರಾನ್ BF.7 ರೂಪಾಂತರ ಸೊಂಕೆ ಎಂಬ ಭೀತಿ ಹಬ್ಬಿದೆ.

ಇದನ್ನೂ ಓದಿ: ಕೊಪ್ಪಳ; ಶಾಲಾ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಎಸಗಿದ ವ್ಯಕ್ತಿ ಬಂಧನ, ಸಾಮೂಹಿಕ ಅತ್ಯಾಚಾರದ ಶಂಕೆ

ಮುಂಜಾಗ್ರತಾ ಕ್ರಮವಾಗಿ ಈ 8 ಮಂದಿಯ ಮಾದರಿಯನ್ನು ಜೆನೋಮ್ ಸೀಕ್ವಿನ್ಸಿಂಗ್ ಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಕೆಐಎನಲ್ಲಿ 8 ಮಂದಿ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಂಡುಬಂದಿತ್ತು. ಎಲ್ಲ ಪಾಸಿಟಿವ್ ಪ್ರಕರಣ ಸ್ವಾಬ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಲಾಗುತ್ತಿದೆ.
 

bengaluru
bengaluru

LEAVE A REPLY

Please enter your comment!
Please enter your name here