Home Uncategorized ಕಲಬುರಗಿಗೆ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ: ರಾಜ್ಯಪಾಲ, ಸಿಎಂ ಸೇರಿ ಗಣ್ಯರಿಂದ ಸ್ವಾಗತ

ಕಲಬುರಗಿಗೆ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ: ರಾಜ್ಯಪಾಲ, ಸಿಎಂ ಸೇರಿ ಗಣ್ಯರಿಂದ ಸ್ವಾಗತ

17
0
bengaluru

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಜಿಲ್ಲೆ ಕಲಬುರಗಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು ಬರಮಾಡಿಕೊಂಡಿದ್ದಾರೆ.  ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಜಿಲ್ಲೆ ಕಲಬುರಗಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು ಬರಮಾಡಿಕೊಂಡಿದ್ದಾರೆ. 

Prime minister Narendra Modi arrived to Kalaburagi fom New Delhi by a special flight at 11.00 AM.
Governor Tawar Chand Ghelot, CM Bommai received him in the airport. Later he & oother VVIPs left for Kodekal to inaugurate NLBC Special Project.@XpressBengaluru
— Ramkrishna Badseshi (@Ramkrishna_TNIE) January 19, 2023

ಇಲ್ಲಿಂದ ಪ್ರಧಾನಿಯವರು ಯಾದಗಿರಿ ಜಿಲ್ಲೆ ಹುಣಸಗಿ ತಲೂಕು ಕೊಡೆಕಲ್‌ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ. ಅಲ್ಲಿ  ಅವರು ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮ ನಡೆಯುವ ವೇದಿಕೆಯ ಮುಂಭಾಗ ಪ್ರಧಾನಿಯವರನ್ನು ಸ್ವಾಗತಿಸಲು ಕಲಾತಂಡಗಳು, ಸಾಂಪ್ರದಾಯಿಕ ಉಡುಗೆ ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಸಜ್ಜಾಗಿದ್ದಾರೆ. 

ಮಧ್ಯಾಹ್ನ 1 ಗಂಟೆಗೆ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸರತ್‌ ಚೆನ್ನೈ ಎಕ್ಸ್‌ಪ್ರೆಸ್‌ ವೇ ಪ್ಯಾಕೇಜ್‌ 3ನೇ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.  ಅಲ್ಲಿಂದ ಕೊಡೆಕಲ್‌ ಹೆಲಿಪ್ಯಾಡ್‌ಗೆ ರಸ್ತೆ ಮೂಲಕ ಹೊರಡು ಹೆಲಿಪ್ಯಾಡ್‌ ಮೂಲಕ ಕಲಬುರಗಿ ಜಿಲ್ಲೆ ಸೇಡಂ ತಾಲೂಕು ಮಳಖೇಡ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಸಾಗಿ ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳ ಶಿಲನ್ಯಾಸ ಮಾಡಲಿದ್ದಾರೆ.

ಕಳೆದ 10 ದಿನಗಳಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಎರಡನೇ ಕರ್ನಾಟಕ ರಾಜ್ಯ ಭೇಟಿ ಇದಾಗಿದೆ. 

LEAVE A REPLY

Please enter your comment!
Please enter your name here