Home Uncategorized ಕಲಬುರಗಿ: ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

ಕಲಬುರಗಿ: ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

19
0

ಕಲಬುರಗಿ, ಫೆ.13: ತಾಯಿ-ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಬಾದ್ ತಾಲೂಕಿನ ಹೊರವಲಯದಲ್ಲಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ಕಲಬುರಗಿಯ ನಗರದ ಮಹಾತ್ಮ ಬಸವೇಶ್ವರ ನಗರದ ಬಡಾವಣೆ ನಿವಾಸಿಗಳಾದ ಸುಮಲತಾ(45) ಹಾಗೂ ಅವರ ಪುತ್ರಿ ವರ್ಷಾ(22) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆಯಿಂದ ತಾಯಿ-ಮಗಳು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಇಂದು ಬೆಳಗ್ಗೆ ಅವರಿಬ್ಬರ ಮೃತದೇಹಗಳು ಶಹಾಬಾದ ತಾಲೂಕಿನ ಹೊರವಲಯದಲ್ಲಿರುವ ಕಾಗಿಣಾ ನದಿಯಲ್ಲಿ ಪತ್ತೆಯಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಶಹಾಬಾದ್ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಕುರಿತು ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here