Home Uncategorized ಕಲಬುರಗಿ: ಮಲಗಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಂದ ಪತಿ

ಕಲಬುರಗಿ: ಮಲಗಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಂದ ಪತಿ

8
0
bengaluru

ಪತ್ನಿಯ ನಡತೆ ಶಂಕಿಸಿದ ಗಂಡ ಆಕೆ ಮಲಗಿದ್ದಾಗ ತಲೆ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಅಂಬಿಕಾ ನಗರದಲ್ಲಿ ನಡೆದಿದೆ.  ಕಲಬುರಗಿ: ಪತ್ನಿಯ ನಡತೆ ಶಂಕಿಸಿದ ಗಂಡ ಆಕೆ ಮಲಗಿದ್ದಾಗ ತಲೆ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಅಂಬಿಕಾ ನಗರದಲ್ಲಿ ನಡೆದಿದೆ. 

ಮೃತ ಗೃಹಿಣಿಯನ್ನು 39 ವರ್ಷದ ಫರೀದಾ ಬೇಗಂ ಎಂದು ಗುರುತಿಸಲಾಗಿದೆ. ಇನ್ನು ಆರೋಪಿ ಪತಿ ಏಜಾಜ್ ಅಹ್ಮದ್ ಕಳೆದ ರಾತ್ರಿ ನಿದ್ದೆಗೆ ಜಾರಿದ ಫರೀದಾ ಬೇಗಂ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ. 

ಎಜಾಜ್ ಹಾಗೂ ಫರೀದಾ ಬೇಗಂ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. 13 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 

ಇದನ್ನೂ ಓದಿ: ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿಚ್ಛೇದಿತ ಮಹಿಳೆಯ ಕೊಲೆ, ಆರೋಪಿ ಮೆಕ್ಯಾನಿಕ್ ಬಂಧನ

bengaluru

ಪತ್ನಿಯ ಶೀಲ ಶಂಕಿಸುತ್ತಿದ್ದ ಪತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಇದೇ ಅಲ್ಲದೆ ಶಾಲೆಗೆ ಹೋಗದಂತೆ ಪ್ರತಿದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸ್ಪೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

bengaluru

LEAVE A REPLY

Please enter your comment!
Please enter your name here