Home Uncategorized ಕಾಡುಗೊಲ್ಲ ಸಮುದಾಯದ ಮಹಿಳೆ ತುಮಕೂರು ವಿ.ವಿಯಿಂದ ಎಂ.ಎಸ್ಸಿ ಗಣಿತದಲ್ಲಿ ಮೊದಲ ರ್ಯಾಂಕ್

ಕಾಡುಗೊಲ್ಲ ಸಮುದಾಯದ ಮಹಿಳೆ ತುಮಕೂರು ವಿ.ವಿಯಿಂದ ಎಂ.ಎಸ್ಸಿ ಗಣಿತದಲ್ಲಿ ಮೊದಲ ರ್ಯಾಂಕ್

2
0
Advertisement
bengaluru

ಹಿಂದುಳಿದ ಕಾಡುಗೊಲ್ಲ ಸಮುದಾಯದ ಮಹಿಳೆಯೊಬ್ಬರು ಎಂಎಸ್ಸಿ ಗಣಿತ ವಿಭಾಗದಲ್ಲಿ ಮೊದಲ ರ್ಯಾಂಕ್ ನೊಂದಿಗೆ ಮೂರು ಚಿನ್ನದ ಪದಕ ಗಳಿಸಿದ್ದಾರೆ. ನಿನ್ನೆ ಸೋಮವಾರ ನಡೆದ ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಅವರಿಗೆ ಪದಕ ಪ್ರದಾನ ಮಾಡಲಾಯಿತು. ತುಮಕೂರು: ಹಿಂದುಳಿದ ಕಾಡುಗೊಲ್ಲ ಸಮುದಾಯದ ಮಹಿಳೆಯೊಬ್ಬರು ಎಂಎಸ್ಸಿ ಗಣಿತ ವಿಭಾಗದಲ್ಲಿ ಮೊದಲ ರ್ಯಾಂಕ್ ನೊಂದಿಗೆ ಮೂರು ಚಿನ್ನದ ಪದಕ ಗಳಿಸಿದ್ದಾರೆ. ನಿನ್ನೆ ಸೋಮವಾರ ನಡೆದ ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಅವರಿಗೆ ಪದಕ ಪ್ರದಾನ ಮಾಡಲಾಯಿತು.

ಬೆಂಗಳೂರು ಮೂಲದ ಸಂಸ್ಥೆಯೊಂದರಲ್ಲಿ ದತ್ತಾಂಶ ವಿಜ್ಞಾನಿಯಾಗಿ ಉದ್ಯೋಗದಲ್ಲಿರುವ ಆಶಾ ಎಲ್‌ಇ, ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದವರು. ಆಕೆಯ ಪೋಷಕರು — ಈರಯ್ಯ ಮತ್ತು ಗಂಗಮ್ಮ — ಅನಕ್ಷರಸ್ಥರು, ಆದರೆ ಈ ಪೋಷಕರು ತಮ್ಮ ನಾಲ್ಕು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಸಫಲರಾಗಿದ್ದಾರೆ. 

ಒಡಹುಟ್ಟಿದವರಲ್ಲಿ ಕಿರಿಯವರಾದ ಆಶಾ ಋತುಚಕ್ರದ ಸಮಯದಲ್ಲಿ ತನ್ನ ಮನೆಯಿಂದ ದೂರವಿರುವ ಹೊಲದಲ್ಲಿ ತಾತ್ಕಾಲಿಕ ಟೆಂಟ್‌ನಲ್ಲಿ ಏಕಾಂಗಿಯಾಗಿ ಉಳಿಯುವ ನಿಷೇಧ ಸೇರಿದಂತೆ ಎಲ್ಲಾ ವಿರೋಧಾಭಾಸಗಳನ್ನು ಎದುರಿಸಿದ್ದರು. 

ನಾನು ಈ ಪದ್ಧತಿಗೆ ಬಲಿಯಾಗಿದ್ದೇನೆ, 22 ದಿನ ಡೇರೆಯಲ್ಲಿ ಕಳೆದಿದ್ದೆ. ಅದು ನರಕಯಾತನೆಯಂತಿತ್ತು. ಈ ಪದ್ಧತಿಯ ವಿರುದ್ಧ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹೋರಾಡುತ್ತಿದ್ದೇನೆ ಎನ್ನುವ ಆಶಾ ಅವರ ಮೂವರು ಹಿರಿಯ ಸಹೋದರಿಯರು ವಿದ್ಯಾವಂತರಾಗಿದ್ದು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆಶಾ ಎಂಕಾಂ ಪದವೀಧರರಾಗಿರುವ ಉದ್ಯಮಿ ಪ್ರಕಾಶ್ ಅವರನ್ನು ವಿವಾಹವಾಗಿದ್ದಾರೆ. ಅವರ ಪತಿ ಪತ್ನಿಗೆ ಯಾವಾಗಲೂ ಬೆಂಬಲ ನೀಡುತ್ತಿರುತ್ತಾರೆ. 

bengaluru bengaluru

ಇತ್ತೀಚೆಗೆ ಸುದ್ದಿ ಮಾಡಿದ್ದ ಒಂದು ತಿಂಗಳ ಹೆಣ್ಣು ಮಗುವಿನ ಸಾವಿನ ನಂತರ ಈ ಸಕಾರಾತ್ಮಕ ಸುದ್ದಿ ಸಮುದಾಯದ ಮಹಿಳೆಯರಿಗೆ ನೈತಿಕ ಸ್ಥೈರ್ಯವನ್ನು ನೀಡಿದೆ.


bengaluru

LEAVE A REPLY

Please enter your comment!
Please enter your name here