Home Uncategorized ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೇಸರಿ ಕಂಡು ಕೆರಳಿದ ಕೋಮು ಗಲಭೆ ಸಂಚಿನ ಸಂಚುಕೋರರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೇಸರಿ ಕಂಡು ಕೆರಳಿದ ಕೋಮು ಗಲಭೆ ಸಂಚಿನ ಸಂಚುಕೋರರು

9
0

ಚಿಕ್ಕಮಗಳೂರು: ಕಾಫಿನಾಡಲ್ಲಿ ಕೇಸರಿ ಕಂಡು ಕೆರಳಿ ಕೋಮು ಗಲಭೆ (Communal riots) ಸೃಷ್ಟಿಸಲು ಸರ್ಕಾರಿ ಕೆಲಸವನ್ನೇ ದುರುಪಯೋಗ ಮಾಡಿಕೊಂಡು ರೂಪಿಸಿದ ಮಹಾ ಸಂಚು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಜಿಲ್ಲಾಡಳಿತದಿಂದ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಚಿಪ್ಸ್ ಕೆಫೆ ಸಂಸ್ಥೆಗೆ ಸೂಚನೆ ನೀಡಲಾಗಿತ್ತು. ಅದರಂತೆ ಕ್ಲ್ಯಾಂಪ್ ಹಾಕಲು ಹೋಗಿದ್ದ ದುರುಳರು ರಸ್ತೆಗೆ ಮೊಳೆಯನ್ನೂ ಸುರಿದಿದ್ದರು. ಪ್ರಕರಣ ಸಂಬಂಧ ನಿನ್ನೆ ಮೊಹಮ್ಮದ್ ಶಹಬಾಜ್ ಮತ್ತು ವಾಹಿಂ ಹುಸೇನ್ ಎಂಬ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸಂಭ್ರಮದ ದತ್ತಜಯಂತಿ (Datta Jayanthi) ಸಹಿಸಲಾಗದೆ ಈ ರೀತಿ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಎಸ್​ಪಿ ಉಮಾ ಪ್ರಶಾಂತ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಬಂಧಿತ ಇಬ್ಬರೂ ನಿಷೇಧಿತ ಪಿಎಫ್​ಐ (PFI) ಸಂಘಟನೆಯ ಕಾರ್ಯಕರ್ತರು ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿಜ್ರಂಭಣೆಯಿಂದ ದತ್ತಜಯಂತಿ ಆಯೋಜಿಸಲಾಗಿತ್ತು. ಎಲ್ಲೆಡೆಯೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಕೇಸರಿ ದಂಡು ಕಂಡು ಕೆರಳಿದ್ದ ಮತಾಂಧರು, ಸರ್ಕಾರಿ ಕೆಲಸವನ್ನೇ ದುರುಪಯೋಗ ಮಾಡಿಕೊಂಡು ಮಹಾ ಸಂಚು ರೂಪಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿ.ಟಿ. ರವಿ

ದತ್ತ ಜಯಂತಿ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಚಿಪ್ಸ್ ಕೆಫೆ ಸಂಸ್ಥೆಗೆ ಜಿಲ್ಲಾಡಳಿತ ಸೂಚಿಸಿತ್ತು. ಅದರಂತೆ ಜಿಲ್ಲಾಡಳಿತ ಕೊಟ್ಟ ಕೆಲಸವನ್ನ ದುರುಪಯೋಗ ಮಾಡಿಕೊಂಡ ದುರುಳರು ಡಿಸೆಂಬರ್ 5ರಂದೇ ಕ್ಲ್ಯಾಂಪ್ ಹಾಕಲು ಹೋಗಿ ರಸ್ತೆಯಲ್ಲಿ ರಸ್ತೆಗೆ ಮೊಳೆಗಳನ್ನು ಸುರಿದಿದ್ದರು. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಂಭ್ರಮದ ದತ್ತಜಯಂತಿ ಸಹಿಸಲಾಗದೆ ಈ ರೀತಿ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಅಲ್ಲದೆ, ದತ್ತಜಯಂತಿ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಗೇಲಿ ಮಾಡಿದ್ದರು. ಆ ಸಿಟ್ಟಿನಿಂದ ಈ ಕೃತ್ಯ ಎಸಗಿಸಲು ಸಂಚು ರೂಪಿಸಿದ್ದೆವು ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಈ ನಡುವೆ ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಎಂದ ಹಿಂದೂ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಆರೋಪಿಗಳ ಹಿನ್ನೆಲೆ ಬಗ್ಗೆ ತನಿಖೆ ಹಾಗೂ ತಾಂತ್ರಿಕ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಜಿಲ್ಲಾ ಎಸ್​ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಬ್ಯಾನರ್​ಗಳನ್ನು ಹಾಕಲಾಗಿತ್ತು. ವಿಜ್ರಂಭಣೆಯಿಂದ ದತ್ತ ಜಯಂತಿ ಆಚರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಹೀಗಾಗಿ ದತ್ತ ಜಯಂತಿಯು ಚೆನ್ನಾಗಿ ನಡೆಯಬಾರದು ಎಂಬ ಉದ್ದೇಶ ಆರೋಪಿಗಳಲ್ಲಿ ಇತ್ತು. ಅಲ್ಲದೆ, ಐದು ವರ್ಷದ ಹಿಂದೆ ದತ್ತಜಯಂತಿ ಮೆರವಣಿಗೆಯಲ್ಲಿ ಟೋಪಿಯನ್ನು ನೋಡಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಇದು ನಮ್ಮ ಮನಸ್ಸಿನಲ್ಲಿ ಇತ್ತು ಎಂದು ಆರೋಪಿಗಳು ಹೇಳಿರುವುದಾಗಿ ಎಸ್​ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here