ಗೋಕರ್ಣ ಬೀಚ್‌ನಲ್ಲಿ ಜೀವ ರಕ್ಷಕ ತಂಡದ ಸಮಯೋಚಿತ ಕ್ರಮದಿಂದಾಗಿ ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ. ಕಾರವಾರ: ಇಲ್ಲಿನ ಗೋಕರ್ಣ ಬೀಚ್‌ನಲ್ಲಿ ಜೀವ ರಕ್ಷಕ ತಂಡದ ಸಮಯೋಚಿತ ಕ್ರಮದಿಂದಾಗಿ ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಆಗಮಿಸಿದ್ದ ಯುವಕರು ಸಮುದ್ರ ತೀರದಲ್ಲಿ ಈಜುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ.
ರಕ್ಷಿಸಲಾದ ಯುವಕರನ್ನು ರಿತುರಾಜ್ (26), ಶ್ರೀಖಾಂಶು ಗುಪ್ತಾ (28), ಪ್ರಶಾಂತ್ ಚಂದ್ರಶೇಖರ್ (28) ಮತ್ತು ಆರುಷಿ ಬನ್ಸಾಲ್ (27) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿದ್ದು, ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು.
ಅವರು ಸಂಕಷ್ಟದಲ್ಲಿದ್ದುದನ್ನು ಗಮನಿಸಿದ ಜೀವ ರಕ್ಷಕ ತಂಡ ಕೂಡಲೇ ಅವರನ್ನು ರಕ್ಷಿಸಿದ್ದಾರೆ. ಕಡಲತೀರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಗೋಕರ್ಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.