Home Uncategorized ಕಾರವಾರ ಬಳಿ ಅಪರೂಪದ 'ಒಕ್ಕಣ್ಣಿನ ನಾಗರಹಾವು' ಪತ್ತೆ

ಕಾರವಾರ ಬಳಿ ಅಪರೂಪದ 'ಒಕ್ಕಣ್ಣಿನ ನಾಗರಹಾವು' ಪತ್ತೆ

7
0
bengaluru

ಕಾರವಾರ ಸಮೀಪದ ಕದ್ರಾದಲ್ಲಿ ಅಪರೂಪದ ಒಕ್ಕಣ್ಣಿನ ನಾಗರಹಾವು ಪತ್ತೆಯಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಕಾರವಾರ: ಕಾರವಾರ ಸಮೀಪದ ಕದ್ರಾದಲ್ಲಿ ಅಪರೂಪದ ಒಕ್ಕಣ್ಣಿನ ನಾಗರಹಾವು ಪತ್ತೆಯಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ರವಾರ ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎನ್ನುವವರ ಮನೆಯ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಕೂಡಲೇ ಚೌಗ್ಲೆ ಅವರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಈ ರೀತಿ ಒಕ್ಕಣ್ಣಿನ ನಾಗರ ಕಾಣ ಸಿಗುವುದು ತೀರಾ ವಿರಳ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇರುವುದಿಲ್ಲ ಬಿಲಾಲ್ ಶೇಖ್ ಅವರು ಮಾಹಿತಿ ನೀಡಿದ್ದಾರೆ.

bengaluru

ಹಾವು ಆನುವಂಶಿಕ ವಿಕಲತೆಯಿಂದ ಹುಟ್ಟಿರಬಹುದು ಅಥವಾ ಮುಂಗುಸಿಯೊಂದಿಗಿನ ಕಾದಾಟದಲ್ಲಿ ಕಣ್ಣು ಕಳೆದುಕೊಂಡಿರಬಹುದು. ಒಂದು ಕಣ್ಣಿನ ನಾಗರಹಾವು ಬಹಳ ಅಪರೂಪವಾಗಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here