Home ಕಲಬುರ್ಗಿ ಕಾಳಜಿ ಕೇಂದ್ರಕ್ಕೆ ಡಿ.ಸಿ.ಭೇಟಿ, ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

ಕಾಳಜಿ ಕೇಂದ್ರಕ್ಕೆ ಡಿ.ಸಿ.ಭೇಟಿ, ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

46
0
Advertisement
bengaluru

ಕಲಬುರಗಿ:

ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾಅವರು ಶುಕ್ರವಾರ ಜೇವರ್ಗಿ ತಾಲೂಕಿನ ನರಿಬೋಳ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ಕಾಳಜಿ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟೋಪಚಾರ ಮತು ಮೂಲಭೂತ ಸೌಕರ್ಯ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಸಂತ್ರಸ್ತರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಭೀಮಾ ನದಿ ಪ್ರವಾಹ ತಗ್ಗಿದ್ದರಿಂದ ಮುಂದಿನ ದಿನದಲ್ಲಿ ಕಾಳಜಿ ಕೇಂದ್ರದಿಂದ ಮನೆಗೆ ಹೋಗುವ ನಿರಾಶ್ರಿತರು ಮೊದಲು ಮನೆಯ ಸುತ್ತಮುತ್ತ ಸ್ವಚ್ಛತೆಗೆ ಗಮನಹರಿಸಬೇಕು. ಗ್ರಾಮದಲ್ಲಿ ನೀರು ನಿಂತಿದಲ್ಲಿ ಅಥವಾ ಚರಂಡಿಗಳು ಮುಚ್ಚಿಹೋಗಿದಲ್ಲಿ ಪಿ.ಡಿ.ಓ. ಅವರ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಪ್ರವಾಹದಿಂದ ಸಾಂಕ್ರಾಮಿಕ ಸೋಂಕು ಬರುವ ಸಾಧ್ಯತೆವಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಈಗಾಗಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

bengaluru bengaluru

bengaluru

LEAVE A REPLY

Please enter your comment!
Please enter your name here