Home Uncategorized ಕೇಂದ್ರ ಬಜೆಟ್ 2023; ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಕ್ಕೆ ಸಿಗುತ್ತಾ ಭರಪೂರ ಕೊಡುಗೆ?

ಕೇಂದ್ರ ಬಜೆಟ್ 2023; ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಕ್ಕೆ ಸಿಗುತ್ತಾ ಭರಪೂರ ಕೊಡುಗೆ?

27
0

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಐದನೇ ಬಜೆಟ್ ಅನ್ನು ಬುಧವಾರ ಮಂಡಿಸಲಿದ್ದು, ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯವು ಈ ಬಾರಿಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಐದನೇ ಬಜೆಟ್ ಅನ್ನು ಬುಧವಾರ ಮಂಡಿಸಲಿದ್ದು, ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯವು ಈ ಬಾರಿಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ರಾಜ್ಯ ಬಜೆಟ್‌ಗೆ ಕೇವಲ ಮೂರು ವಾರಗಳ ಮೊದಲು ಕೇಂದ್ರ ಸರ್ಕಾರ ಬಜೆಟ್ ಅನ್ನು ಮಂಡಿಸುತ್ತಿದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಕಾರಣ ಬಜೆಟ್ ಕುರಿತು ನಿರೀಕ್ಷೆಗಳು ಹೆಚ್ಚಿವೆ.

ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್ ಶಾಸ್ತ್ರಿ ಅವರು ಮಾತನಾಡಿ, ರಾಜ್ಯವು ಚುನಾವಣಾ ಹೊಸ್ತಿನಲ್ಲಿರುವುದರಿಂದ ಕರ್ನಾಟಕವು ಈ ಬಾರಿಯ ಕೇಂದ್ರದ ಬಜೆಟ್ ಮೇಲೆ ಹೆಚ್ಚಿನದ್ದನ್ನು ನಿರೀಕ್ಷಿಸಬಹುದು. ಕೇಂದ್ರ ಸರ್ಕಾರವು ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ವಿಶೇಷ ಹಂಚಿಕೆಗಳನ್ನು ಘೋಷಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದು ಹೇಳಿದ್ದಾರೆ.

ಕೇಂದ್ರದ ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಘೋಷಣೆಗಳಾಗುವ ಸಾಧ್ಯತೆಗಳಿವೆ. ಮತದಾರರನ್ನು ಓಲೈಸಲು ಬಡವರ ಪರ ಬಜೆಟ್ ಇದಾಗಿರಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾತನಾಡಿ, ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ರಾಜ್ಯ ಮತ್ತು ಕೇಂದ್ರದ ನಾಯಕರ ಮೇಲೆ ಒತ್ತಡವಿದೆ. “ಕೇಂದ್ರ ಬಜೆಟ್‌ನಲ್ಲಿ ಖಂಡಿತವಾಗಿಯೂ ಕರ್ನಾಟಕಕ್ಕೆ ದೊಡ್ಡ ಘೋಷಣೆಗಳಿರಲಿದೆ. ಹಿಂದಿನ ವರ್ಷಗಳಲ್ಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಉತ್ತಮ ಹಂಚಿಕೆಗಳಾಗಿತ್ತು. ಆ ವರ್ಷ ಆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದವು. ನಾವು ರಾಜ್ಯಕ್ಕೆ ದೊಡ್ಡ ಕೊಡುಗೆಗಳನ್ನು ನೀಡದಿದ್ದರೆ, ಅದು ನಮ್ಮನ್ನು ಗುರಿಯಾಗಿಸಲು ವಿರೋಧ ಪಕ್ಷಗಳಿಗೆ ಮದ್ದು ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಈ ವರ್ಷವನ್ನು ‘ಅಂತರರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸಲಾಗಿದ್ದು, ಕರ್ನಾಟಕವು ರಾಗಿ ಕ್ಷೇತ್ರದಲ್ಲಿ ಪ್ರವರ್ತಕವಾಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸದೇನೂ ಇರುವುದಿಲ್ಲ, ಬದಲಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ದೊಡ್ಡ ಯೋಜನೆಗಳಿಗೆ ನಿಧಿ ಹಂಚಿಕೆಯನ್ನು ಹೆಚ್ಚಿಸಲಾಗುವುದು ಎಂದು ಕೆಲವರು ಹೇಳಿದ್ದಾರೆ.

ಎಫ್‌ಕೆಸಿಸಿಐನ ರಾಜ್ಯ ತೆರಿಗೆ ಸಮಿತಿಯ ಸದಸ್ಯ ಬಿಟಿ ಮನೋಹರ್ ಅವರು ಮಾತನಾಡಿ, ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ವೋಟ್ ಆನ್ ಅಕೌಂಟ್ ಆಗಿರುವ ಈ ಅವಧಿಯ ಕೊನೆಯ ಬಜೆಟ್ ಅನ್ನು ಸಿಎಂ ಬೊಮ್ಮಾಯಿ ಮಂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಈ ಬಾರಿಯ ಬಜೆಟ್ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

“ವಿವಿಧ ಜಿಲ್ಲೆಗಳು ಮತ್ತು ಪಟ್ಟಣಗಳಲ್ಲಿ ಮೆಟ್ರೋ, ಉಪನಗರ ರೈಲು ಅಥವಾ ಮೆಗಾ ನೀರಾವರಿ ಯೋಜನೆಗಳಂತಹ ವಿವಿಧ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರವು ದೊಡ್ಡ ಪ್ರಮಾಣದ ಅನುದಾನವನ್ನು ನಿರೀಕ್ಷಿಸುತ್ತಿದೆ. ಕರ್ನಾಟಕದ ಶ್ರೇಣಿ-II ಮತ್ತು ಶ್ರೇಣಿ-III ನಗರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here