ವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಯುವತಿಯೋರ್ವಳನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಡಗು: ವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಯುವತಿಯೋರ್ವಳನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಾದಪ್ಪ, ಸುನಂದ ಅವರ ಪುತ್ರಿ 24 ವರ್ಷದ ಬುಟ್ಟಿಯಂಡ ಆರತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿಯ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮನೆಯಿಂದ ಹೊರಗೆ ಕರೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು ಆದರೆ ಅದೇ ಊರಿನ ತಿಮ್ಮಯ್ಯ ಎಂಬಾತನ ವಿರುದ್ಧ ಶಂಕೆ ವ್ಯಕ್ತವಾಗಿದೆ.
ಇನ್ನು ಕೃತ್ಯ ನಡೆದ ಸ್ಥಳದಿಂದ ಕೆಲವೇ ದೂರದಲ್ಲಿರುವ ಕೆರೆಯ ಬಳಿ ತಿಮ್ಮಯ್ಯನ ಚಪ್ಪಲಿ, ಹೆಲ್ಮೆಟ್ ಪತ್ತೆಯಾಗಿದ್ದು ತಿಮ್ಮಯ್ಯನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.