Home Uncategorized ಕೋವಿಡ್-19: ಬೆಂಗಳೂರಿನಲ್ಲಿ 16 ಸೇರಿ ರಾಜ್ಯದಲ್ಲಿ ಇಂದು 17 ಮಂದಿಗೆ ಪಾಸಿಟಿವ್; ಸಾವು ಶೂನ್ಯ

ಕೋವಿಡ್-19: ಬೆಂಗಳೂರಿನಲ್ಲಿ 16 ಸೇರಿ ರಾಜ್ಯದಲ್ಲಿ ಇಂದು 17 ಮಂದಿಗೆ ಪಾಸಿಟಿವ್; ಸಾವು ಶೂನ್ಯ

16
0
Advertisement
bengaluru

ರಾಜ್ಯದಲ್ಲಿ ಮತ್ತೆ ಕೊರೋನಾ ಉಲ್ಬಣಗೊಳ್ಳುವ ಆತಂಕ ಎದುರಾಗಿದ್ದು, ರಾಜ್ಯ ಸರ್ಕಾರ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಈ ಮಧ್ಯ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ17 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಉಲ್ಬಣಗೊಳ್ಳುವ ಆತಂಕ ಎದುರಾಗಿದ್ದು, ರಾಜ್ಯ ಸರ್ಕಾರ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಈ ಮಧ್ಯ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ17 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,71,760ಕ್ಕೆ ಏರಿಕೆಯಾಗಿದೆ.

ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40265 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಸದ್ಯಕ್ಕೆ ಭಾರತದಲ್ಲಿ ಕೋವಿಡ್ ಉಲ್ಬಣವಾಗುವ ಸಾಧ್ಯತೆ ಇಲ್ಲ: ವೈರಾಲಜಿಸ್ಟ್ ಡಾ. ಕಂಗ್

ಬೆಂಗಳೂರಿನಲ್ಲಿ ಇಂದು 16 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 1876561ಕ್ಕೆ ಏರಿಕೆಯಾಗಿದೆ. ಇಂದು ರಾಜಧಾನಿಯಲ್ಲೂ ಕೊರೋನಾದಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

bengaluru bengaluru

ರಾಜ್ಯದಲ್ಲಿ ಇಂದು 40 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 40,30,215ಕ್ಕೆ ಏರಿಕೆಯಾಗಿದೆ. ಇನ್ನು 1238 ಸಕ್ರಿಯ ಪ್ರಕರಣಗಳಿವೆ.

ಇಂದಿನ 23/12/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/lZx29OmHuL @CMofKarnataka @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/YFN6Va3lLI
— K’taka Health Dept (@DHFWKA) December 23, 2022


bengaluru

LEAVE A REPLY

Please enter your comment!
Please enter your name here