Home Uncategorized ಗದಗ: ಮತ್ತೆ ಕಾಣಿಸಿಕೊಂಡ ಬಯಲು ಶೌಚ ಪ್ರವೃತ್ತಿ; ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಮಹಿಳೆಯರು

ಗದಗ: ಮತ್ತೆ ಕಾಣಿಸಿಕೊಂಡ ಬಯಲು ಶೌಚ ಪ್ರವೃತ್ತಿ; ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಮಹಿಳೆಯರು

27
0

ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಾರ್ವಜನಿಕ ಶೌಚಾಲಯಗಳಿಲ್ಲ ಎಂದು ಆಕ್ರೋಶಗೊಂಡ ನೂರಾರು ಮಹಿಳೆಯರು ಶುಕ್ರವಾರ ಗದಗ ಸಮೀಪದ ಡಂಬಳದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಗೆ ಮೂರು ಗಂಟೆಗಳ ಕಾಲ ಬೀಗ ಜಡಿದಿದ್ದಾರೆ. ಗದಗ: ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಾರ್ವಜನಿಕ ಶೌಚಾಲಯಗಳಿಲ್ಲ ಎಂದು ಆಕ್ರೋಶಗೊಂಡ ನೂರಾರು ಮಹಿಳೆಯರು ಶುಕ್ರವಾರ ಗದಗ ಸಮೀಪದ ಡಂಬಳದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಗೆ ಮೂರು ಗಂಟೆಗಳ ಕಾಲ ಬೀಗ ಜಡಿದಿದ್ದಾರೆ.

2018ರಲ್ಲಿ ಗದಗ ಜಿಲ್ಲೆಯನ್ನು ಬಯಲು ಶೌಚ ಮುಕ್ತ (ಒಡಿಎಫ್) ಎಂದು ಘೋಷಿಸಿದ ಬಳಿಕವೂ ಬಯಲು ಶೌಚ ಮುಕ್ತವಾಗದಿರುವುದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.

ಕೂಡಲೇ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹಿಳೆಯರಿಗೆ ಭರವಸೆ ನೀಡಿದ ಬಳಿಕವೇ ಕಚೇರಿಗೆ ಜಡಿದಿದ್ದ ಬೀಗವನ್ನು ತೆರವು ಮಾಡಿದರು.

ಡಂಬಳದ ನಿವಾಸಿಗಳಾದ ನೀಲವ್ವ ದೊಡ್ಡಮನಿ ಹಾಗೂ ರೇಣುಕಾ ಪಾಟೀಲ ಮಾತನಾಡಿ, ‘ಹೊಸ ಶೌಚಾಲಯ ನಿರ್ಮಿಸಿ, ಸುಸ್ಥಿತಿಯಲ್ಲಿಲ್ಲದ ಶೌಚಾಲಯಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಅವರು ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಅವರು ಒಡಿಎಫ್ ಬೋರ್ಡ್ ಹಾಕಿದ್ದಾರೆ, ಆದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲ. ಡಂಬಳ ಮತ್ತು ಇತರ ಗ್ರಾಮಗಳು ಕಾಗದದ ಮೇಲೆ ಮಾತ್ರ ODF ಆಗಿದೆ’ ಎಂದು ದೂರಿದರು.

ಕೆಲವರು ಬಯಲು ಶೌಚದ ಮೊರೆ ಹೋಗುತ್ತಿರುವುದಕ್ಕೆ ಅದಿಕಾರಿಗಳು ಸಾಂಕ್ರಾಮಿಕ ರೋಗವನ್ನು ದೂಷಿಸುತ್ತಾರೆ. ಸಾಂಕ್ರಾಮಿಕ ಸಮಯದಲ್ಲಿ ಅಧಿಕಾರಿಗಳು ಲಸಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದರಿಂದ ಒಡಿಎಫ್ ನಿಯಮಗಳ ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳುತ್ತಾರೆ. ಎರಡನೇ ಅಲೆಯ ನಂತರ, ಅನೇಕ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಯಲು ಶೌಚವನ್ನು ನಿಲ್ಲಿಸಲು ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಆದರೆ, ಕೆಲವು ಗ್ರಾಮಸ್ಥರು ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಬಯಲು ಶೌಚಕ್ಕೆ ತೆರಳುತ್ತಾರೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here