Home Uncategorized ಗಾಲಿ ಜನಾರ್ಧನರೆಡ್ಡಿ ಹೊಸ ಪಕ್ಷ ಸ್ಥಾಪಿಸಲಿರುವ ಬಗ್ಗೆ ರಾಯಚೂರಲ್ಲಿ ಮತ್ತೊಂದು ಸುಳಿವು ಸಿಕ್ಕಿತು!

ಗಾಲಿ ಜನಾರ್ಧನರೆಡ್ಡಿ ಹೊಸ ಪಕ್ಷ ಸ್ಥಾಪಿಸಲಿರುವ ಬಗ್ಗೆ ರಾಯಚೂರಲ್ಲಿ ಮತ್ತೊಂದು ಸುಳಿವು ಸಿಕ್ಕಿತು!

0
0
bengaluru

ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ (G Janardhan Reddy) ಅವರು ಒಂದು ಹೊಸ ಪಕ್ಷ ಸ್ಥಾಪಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ. ರಾಯಚೂರಿನಲ್ಲಿ ರೆಡ್ಡಿಯವರನ್ನು ಬೆಂಬಲಿಗರು ಸನ್ಮಾನಿಸುವ ಸಂದರ್ಭದಲ್ಲಿ ಹೊಸ ಪಕ್ಷ ರಚನೆಗೆ ಖಚಿತವಾದ ಸುಳಿವು ಸಿಕ್ಕಿತು. ರಾಯಚೂರು ಭಾಗದಲ್ಲಿ ರೆಡ್ಡಿಯವರ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಯ್ಕೆ ಕೆಲಸವೂ ಜಾರಿಯಲ್ಲಿದೆ. ರೆಡ್ಡಿಯವರ ಆಪ್ತರಲ್ಲಿ ಒಬ್ಬರಾಗಿರುವ ಮಲ್ಲಣ್ಣ ನಾಗರಬೆಂಚಿ (Mallanna Ngarabenchi) ಎನ್ನುವವರು ಗುಂಪಿನಲ್ಲಿದ್ದ ಉದ್ಯಮಿ ಮಲ್ಲಿಕಾರ್ಜುನರನ್ನು (Mallikarjun) ಮುಂದೆ ಕರೆಯುವಾಗ, ‘ಪಕ್ಷದ ಅಭ್ಯರ್ಥಿಯಾಗಲಿರುವ ನೀವೇ ದೂರ ನಿಂತುಬಿಟ್ಟರೆ ಹೇಗೆ,’ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

bengaluru

LEAVE A REPLY

Please enter your comment!
Please enter your name here