Home Uncategorized ಗಿನ್ನೀಸ್ ದಾಖಲೆ ಸೇರಿದ ಕರ್ನಾಟಕದ ಯೋಗಥಾನ್-2023; ರಾಜಸ್ಥಾನದ ದಾಖಲೆ ಸರಿಗಟ್ಟಿದ ರಾಜ್ಯ!  

ಗಿನ್ನೀಸ್ ದಾಖಲೆ ಸೇರಿದ ಕರ್ನಾಟಕದ ಯೋಗಥಾನ್-2023; ರಾಜಸ್ಥಾನದ ದಾಖಲೆ ಸರಿಗಟ್ಟಿದ ರಾಜ್ಯ!  

7
0
bengaluru

ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯಾದ್ಯಂತ ನಡೆದ ಯೋಗಥಾನ್ ಗಿನ್ನೀಸ್ ದಾಖಲೆ ಸೇರುವಲ್ಲಿ ಯಶಸ್ವಿಯಾಗಿದೆ.  ಬೆಂಗಳೂರು: ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯಾದ್ಯಂತ ನಡೆದ ಯೋಗಥಾನ್ ಗಿನ್ನೀಸ್ ದಾಖಲೆ ಸೇರುವಲ್ಲಿ ಯಶಸ್ವಿಯಾಗಿದೆ. 

ಯೋಗಥಾನ್ 2023 ಕರ್ನಾಟಕದ ಹೆಸರಿನಲ್ಲಿ ಗಿನ್ನೀಸ್ ದಾಖಲೆ ಸೇರಿದ್ದು, ಧಾರವಾಡ ಸೇರಿದಂತೆ ರಾಜ್ಯಾದ್ಯಂತ  ಏಕಕಾಲಕ್ಕೆ 4,05,255ಕ್ಕೂ ಮಂದಿ ಸೇರಿ ಯೋಗ ಮಾಡಿರುವುದು ಈ ಹಿಂದೆ ರಾಜಸ್ಥಾನದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ. 

2018 ರಲ್ಲಿ ರಾಜಸ್ಥಾನದಲ್ಲಿ ಏಕಕಾಲಕ್ಕೆ 1.60 ಲಕ್ಷ ಜನರು ಯೋಗ ಮಾಡಿದ್ದು ದಾಖಲೆಯಾಗಿತ್ತು. ಇಂದು ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಯೋಗಥಾನ್ ಉದ್ಘಾಟಿಸಿದ್ದರು.

ಇದನ್ನೂ ಓದಿ: ವಿಶ್ವದಾಖಲೆಯ ಯೋಗಥಾನ್-2023ಕ್ಕೆ ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್ ಚಾಲನೆ

bengaluru

ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಯೋಗಪಟುಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here