Home ಕ್ರೀಡೆ ಗೆದ್ದ ಡೆಲ್ಲಿ, ಸೋತ ಆರ್ ಸಿಬಿ

ಗೆದ್ದ ಡೆಲ್ಲಿ, ಸೋತ ಆರ್ ಸಿಬಿ

26
0

ಪ್ಲೇ ಆಫ್ ಗೆ ಕ್ವಾಲಿಫೈ

ಅಬುದಾಬಿ:

ಲೀಗ್ ಹಂತದ ಮಹತ್ವದ ಪಂದ್ತದಲ್ಲಿ ಸೊಗಸಾದ ಆಟವಾಡಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗೆ 152 ರನ್ ಸೇರಿಸಿದೆ. ಗುರಿಯನ್ನು ಹಿಂಬಾಲಿಸಿದ ಡೆಲ್ಲಿ 19 ಓವರ್ ಗಳಲ್ಲಿ 4 ವಿಕೆಟ್ ಗೆ 154 ರನ್ ಕಲೆ ಹಾಕಿ ಜಯ ಸಾಧಿಸಿತು.

153 ರನ್ ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಪೃಥ್ವಿ ಶಾ ಮೊಹಮ್ಮದ್ ಸಿರಾಜ್ ಅವರ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಬೋಲ್ಡ್ ಆದರು.

ಎರಡನೇ ವಿಕೆಟ್ ಗೆ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಆಧಾರವಾದರು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕಲು ವಿರಾಟ್ ಮಾಡಿಕೊಂಡ ಯೋಜನೆ ಕೈ ಕೊಟ್ಟವು. ಈ ಜೋಡಿ 65 ಎಸೆತಗಳಲ್ಲಿ 88 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಶಿಖರ್ ಧವನ್ 54 ರನ್ ಬಾರಿಸಿ ಶಹಬಾಜ್ ಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ 7 ರನ್ ಬಾರಿಸಿ ನಿರಾಸೆ ಅನುಭವಿಸಿದರು.

ಟೂರ್ನಿಯಲ್ಲಿ ಇದೇ ಮೊದಲಾಬಾರಿಗೆ ನೆಲಕಚ್ಚಿ ಬ್ಯಾಟ್ ಮಾಡಿದ ಅಜಿಂಕ್ಯ ದೊಡ್ಡ ಇನ್ನಿಂಗ್ಸ್ ಕಟ್ಟಿದರು. ಇವರು 60 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.

ರಿಷಭ್ ಪಂತ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ಜೋಶ್ ಫೆಲಿಪ್ಪೆ (12) ರಬಾಡ ಎಸೆತವನ್ನು ತಪ್ಪಾಗಿ ಅರ್ಥಹಿಸಿಕೊಂಡು ಔಟ್ ಆದರು.

ಎರಡನೇ ವಿಕೆಟ್ ಗೆ ಕರ್ನಾಟಕದ ದೇವದತ್ ಪಡೀಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ಶ್ರೇಯಸ್ ಅಯ್ಯರ್ ಬೆವರು ಹರಿಸಿದರು. ಜೀವದಾನದ ಲಾಭ ಪಡೆದು ಆಡುವಲ್ಲಿ ವಿಫಲರಾದ ವಿರಾಟ್ ಕೊಹ್ಲಿ 29 ರನ್ ಗಳಿಗೆ ಆಟ ಮುಗಿಸಿದರು. ಇದಕ್ಕೂ ಮೊದಲು ಈ ಜೋಡಿ 57 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು.

ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ದೇವದತ್ 41 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡಂತೆ 50 ರನ್ ಸೇರಿಸಿ ಔಟ್ ಆದರು.

ಕ್ರಿಸ್ ಮೋರಿಸ್ (0) ನಿರಾಸೆ ಅನುಭವಿಸಿದರು. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ 21 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ನೆರವಿನಿಂದ 35 ರನ್ ಸಿಡಿಸಿದರೆ, ಶಿವಂ ದುಬೆ 17 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 7 ವಿಕೆಟ್ ಗೆ 152

(ದೇವದತ್ ಪಡೀಕ್ಕಲ್ 50, ಎಬಿಡಿ ವಿಲಿಯರ್ಸ್ 33, ವಿರಾಟ್ ಕೊಹ್ಲಿ 29, ರಬಾಡ 28ಕ್ಕೆ 2, ನೊಕಿಯೆ 33 ಕ್ಕೆ 3, ರಬಾಡ 30ಕ್ಕೆ 2).

ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ ಗಳಲ್ಲಿ 4 ವಿಕೆಟ್ ಗೆ 154

(ಶಿಖರ್ ಧವನ್ 54, ಅಜಿಂಕ್ಯ 60, ಶುಹಬಾಜ್ ಅಹ್ಮದ್ 26 ಕ್ಕೆ 2).

LEAVE A REPLY

Please enter your comment!
Please enter your name here