Home Uncategorized ಚಳಿಗೆ ಸಿಲಿಕಾನ್ ಸಿಟಿ ಗಢಗಢ: ಬೆಂಗಳೂರಿನಲ್ಲಿ 4 ವರ್ಷಗಳ ಬಳಿಕ ಕನಿಷ್ಠ ತಾಪಮಾನ ದಾಖಲು

ಚಳಿಗೆ ಸಿಲಿಕಾನ್ ಸಿಟಿ ಗಢಗಢ: ಬೆಂಗಳೂರಿನಲ್ಲಿ 4 ವರ್ಷಗಳ ಬಳಿಕ ಕನಿಷ್ಠ ತಾಪಮಾನ ದಾಖಲು

22
0

ಶೀತಮಾರುತಗಳ ಪ್ರಭಾವದಿಂದಾಗಿ ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಚಳಿ ಹೆಚ್ಚಾಗಿದ್ದು, 4 ವರ್ಷಗಳ ಬಳಿಕ ಬುಧವಾರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು: ಶೀತಮಾರುತಗಳ ಪ್ರಭಾವದಿಂದಾಗಿ ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಚಳಿ ಹೆಚ್ಚಾಗಿದ್ದು, 4 ವರ್ಷಗಳ ಬಳಿಕ ಬುಧವಾರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಗರದ ಕನಿಷ್ಠ ತಾಪಮಾನವು ಜನವರಿ 9 ರಿಂದ 13 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ ಎಂದು ಹೇಳಿದೆ.

“ಇದು ಗರಿಷ್ಠ ಚಳಿಗಾಲದ ಆರಂಭದ ಸೂಚನೆಯಾಗಿದೆ. ಇದೇ ರೀತಿಯ ಪರಿಸ್ಥಿತಿಗಳು ಇನ್ನೂ ಕೆಲವು ದಿನಗಳವರೆಗೆ ಇರುತ್ತವೆ ಎಂದು ಬೆಂಗಳೂರಿನ ಐಎಂಡಿ ನಿರ್ದೇಶಕ ಎ ಪ್ರಸಾದ್ ಅವರು ಹೇಳಿದ್ದಾರೆ.

ಪ್ರತೀ ವರ್ಷ ಈ ಸಮಯದಲ್ಲಿ ಸಾಮಾನ್ಯ ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್ ಇರುತ್ತಿತ್ತು. ಆದರೆ, ಈ ಬಾರಿ ಬೆಂಗಳೂರಿನಲ್ಲಿ ಶೀತಗಾಳಿ ಬೀಸುವುದಿಲ್ಲ ತಿಳಿಸಿದ್ದಾರೆ.

ಈ ನಡುವೆ ಇಲಾಖೆಯು ಬೀದರ್, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಶೀತಮಾರುತಗಳ ಎಚ್ಚರಿಕೆಯನ್ನು ನೀಡಿದೆ.

ಮುಂದಿನ 48 ಗಂಟೆಗಳಲ್ಲಿ ಆಗಸವು ಸ್ಪಷ್ಟವಾಗಿ ಗೋಚರಿಸಲಿದ್ದು, ನಗರವು ಬೆಳಿಗ್ಗೆ 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನದೊಂದಿಗೆ ಮಂಜು ಮುಸುಕಿತ ವಾತಾವಣವನ್ನು ನೋಡಲಿದೆ ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here