Home Uncategorized ಚಿಕ್ಕಮಗಳೂರು: ಎಲ್ಲಾ ಬಿಕ್ಕಟಿನ ಸಂದರ್ಭಗಳಲ್ಲಿ ಅಡಿಕೆ ಬೆಳೆಗಾರರ ರಕ್ಷಣೆ- ಜೆ.ಪಿ.ನಡ್ಡಾ

ಚಿಕ್ಕಮಗಳೂರು: ಎಲ್ಲಾ ಬಿಕ್ಕಟಿನ ಸಂದರ್ಭಗಳಲ್ಲಿ ಅಡಿಕೆ ಬೆಳೆಗಾರರ ರಕ್ಷಣೆ- ಜೆ.ಪಿ.ನಡ್ಡಾ

17
0
Advertisement
bengaluru

ಕೇಂದ್ರ ಸರ್ಕಾರ ಎಲ್ಲಾ ಬಿಕ್ಕಟ್ಟಿನಿಂದ ಅಡಿಕೆ ಬೆಳೆಗಾರರನ್ನು ರಕ್ಷಣೆ ಮಾಡಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಕೊಪ್ಪ: ಕೇಂದ್ರ ಸರ್ಕಾರ ಎಲ್ಲಾ ಬಿಕ್ಕಟ್ಟಿನಿಂದ ಅಡಿಕೆ ಬೆಳೆಗಾರರನ್ನು ರಕ್ಷಣೆ ಮಾಡಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದಲ್ಲಿ ನಡೆದ ಅಡಿಕೆ ಬೆಳೆಗಾರರ  ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದ್ದು, ಮೂರು ಬಾರಿ ಅಡಿಕೆ ಕನಿಷ್ಠ ಆಮದು ಬೆಲೆಯನ್ನು ಹೆಚ್ಚಿಸಲಾಗಿದೆ ಎಂದರು. 

ಇದನ್ನೂ ಓದಿ: ‘ಅಮೆರಿಕದಲ್ಲಿ ಈಗಲೂ ಮಾಸ್ಕ್ ಧರಿಸುತ್ತಿದ್ದಾರೆ, ಉಕ್ರೇನ್-ರಷ್ಯಾ ಯುದ್ಧಕ್ಕೆ ಬ್ರೇಕ್ ಹಾಕಿ ಭಾರತೀಯರ ರಕ್ಷಿಸಿದ್ದು ಮೋದಿ’: ಜೆಪಿ ನಡ್ಡಾ

ಅಸ್ಥಿರಗೊಳಿಸುವ ಬೆಲೆಗಳು ಮತ್ತು ಕಳಪೆ ಗುಣಮಟ್ಟದ ಉತ್ಪನ್ನ ದೇಶೀಯ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಲು ನಾವು ಪ್ರಯತ್ನಿಸಿದ್ದೇವೆ. ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗದಿರಲಿ ಎಂದು  ಸರ್ಕಾರ ಪ್ರತಿ ನಿತ್ಯ ಪರಿಗಣಿಸಿದ್ದು, ಎಲ್ಲಾ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

bengaluru bengaluru

Chikkamagaluru, K’taka | The govt. has increased the areca nut minimum import price by 3 times. We’ve tried to prevent destabilising prices & poor-quality product from entering the domestic market: National President BJP, JP Nadda pic.twitter.com/1q4WiKZ3DD
— ANI (@ANI) February 20, 2023

ಡಬಲ್ ಎಂಜಿನ್ ಸರ್ಕಾರ ರೈತರು, ಮಹಿಳೆಯರು, ಬಡವರು, ದಲಿತರು, ಯುವಕರು ಸೇರಿದಂತೆ ಸಮಾಜದ ಎಲ್ಲ ವರ್ಗದವರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸಬಲೀಕರಣದತ್ತ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಜೆಪಿ ನಡ್ಡಾ ತಿಳಿಸಿದರು. 


bengaluru

LEAVE A REPLY

Please enter your comment!
Please enter your name here