ಮುಳ್ಳುಹಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂದಿ ಬಳಿ ನಡೆದಿದೆ. ಚಿಕ್ಕಮಗಳೂರು: ಮುಳ್ಳುಹಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂದಿ ಬಳಿ ನಡೆದಿದೆ.
ತಮಿಳುನಾಡು ಮೂಲದ 30 ವರ್ಷದ ಗೋವಿಂದರಾಜು ಮತ್ತು 29 ವರ್ಷದ ವಿಜಯಕುಮಾರ್ ಮೃತ ದುರ್ದೈವಿಗಳು. ಮುಳ್ಳುಹಂದಿ ಹಿಡಿಯುವ ಸಲುವಾಗಿ ಗುಹೆಯೊಳಗೆ ಬೆಂಕಿ ಹಾಕಿದ್ದರು. ನಂತರ ನಾಲ್ವರು ಗುಹೆಯೊಳಗೆ ಹೋಗಿದ್ದರು. ಈ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: TNIE-ಕನ್ನಡಪ್ರಭ ಆನ್ಲೈನ್ ವರದಿ ಫಲಶೃತಿ: ಹುಲಿ ದಾಳಿ-ಸಾವು ಕುರಿತು ಉಪ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು!
ಕಾಫಿ ತೋಟದ ಕೆಲಸಕ್ಕೆಂದು ತಮಿಳುನಾಡಿನಿಂದ ನಾಲ್ವರು ಕಾರ್ಮಿಕರು ಬಂದಿದ್ದರು. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.