Home Uncategorized ಚಿಕ್ಕಮಗಳೂರು: ಸಾಲಕ್ಕೆ ಹೆದರಿ ಜೀವನ ಅಂತ್ಯಗೊಳಿಸಿದ ದಂಪತಿ; ಅನಾಥರಾದ ಮಕ್ಕಳು!

ಚಿಕ್ಕಮಗಳೂರು: ಸಾಲಕ್ಕೆ ಹೆದರಿ ಜೀವನ ಅಂತ್ಯಗೊಳಿಸಿದ ದಂಪತಿ; ಅನಾಥರಾದ ಮಕ್ಕಳು!

7
0
Advertisement
bengaluru

ಸಾಲದ ಕೂಪಕ್ಕೆ ಸಿಲುಕಿದ್ದ ದಂಪತಿ ಜನ್ನಾಪುರದ ಎನ್‌ಟಿಬಿ ಕಚೇರಿ ಬಳಿಯ ಮನೆಯಲ್ಲಿ ಬುಧವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭದ್ರಾವತಿ: ಸಾಲದ ಕೂಪಕ್ಕೆ ಸಿಲುಕಿದ್ದ ದಂಪತಿ ಜನ್ನಾಪುರದ ಎನ್‌ಟಿಬಿ ಕಚೇರಿ ಬಳಿಯ ಮನೆಯಲ್ಲಿ ಬುಧವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಭದ್ರಾವತಿಯ ಮಧು(25), ಮೋನಿಕಾ(23) ಮೃತ ದುರ್ದೈವಿಗಳು, ದಂಪತಿಗೆ ಇಬ್ಬರು ಮಕ್ಕಳಿದ್ದು ಅನಾಥರಾಗಿದ್ದಾರೆ. ಮಧು ಪದವಿ ಶಿಕ್ಷಣ ಪಡೆದಿದ್ದು ಕೂಲಿ ಕೆಲಸ ಮಾಡುತ್ತಿದ್ದ.

ಇತ್ತೀಚೆಗೆ ಮೈಕ್ರೋ ಫೈನಾನ್ಸ್‌ನಿಂದ ಎರಡು ಲಕ್ಷ ರೂ. ಸಾಲ ಪಡೆದಿದ್ದು ಫೈನಾನ್ಸ್ ಅಧಿಕಾರಿಗಳು, ಸಿಬ್ಬಂದಿ ಹಣ ವಾಪಸ್ ಕಟ್ಟುವಂತೆ ಪೀಡಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದ ಪತಿ ಮತ್ತು ಪತ್ನಿ ಬುಧವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಟಾರ್ಚರ್ ತಾಳದೆ ಆತ್ಮಹತ್ಯೆಗೆ ಶರಣು

bengaluru bengaluru

3 ವರ್ಷ ಹಾಗೂ 9 ತಿಂಗಳ ಗಂಡು ಮಕ್ಕಳು ಅನಾಥರಾಗಿದ್ದಾರೆ. ಬೆಳಗ್ಗೆ 8 ಗಂಟೆಯಾದರೂ ಮನೆಯಿಂದ ಯಾರೂ ಹೊರಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಮನೆಯ ಬಾಗಿಲು ತಟ್ಟಿದರು. ಸ್ಪಂದನೆ ಬಾರದಿದ್ದಾಗ ಬಾಗಿಲು ಒಡೆದು ಒಳಹೊಕ್ಕು ನೋಡಿದಾಗ ದಂಪತಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


bengaluru

LEAVE A REPLY

Please enter your comment!
Please enter your name here