Home Uncategorized ಚಿಕ್ಕಮಗಳೂರು: ಹಾಸನದಿಂದ ಕೆಲಸ ಅರಸಿ ಬಂದು ರಸ್ತೆಬದಿಯಲ್ಲಿ ಆಶ್ರಯ ಪಡೆದ ದಂಪತಿ ಮೇಲೆ ಕಾಡಾನೆ ದಾಳಿ

ಚಿಕ್ಕಮಗಳೂರು: ಹಾಸನದಿಂದ ಕೆಲಸ ಅರಸಿ ಬಂದು ರಸ್ತೆಬದಿಯಲ್ಲಿ ಆಶ್ರಯ ಪಡೆದ ದಂಪತಿ ಮೇಲೆ ಕಾಡಾನೆ ದಾಳಿ

0
0
bengaluru

ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ಬಳಿ ರಸ್ತೆ ಬದಿ ಮಲಗಿದ್ದ ದಂಪತಿ ಮೇಲೆ ಕಾಡಾನೆ ದಾಳಿ ನಡೆಸಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ದಂಪತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಿಕ್ಕಮಗಳೂರು: ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ಬಳಿ ರಸ್ತೆ ಬದಿ ಮಲಗಿದ್ದ ದಂಪತಿ ಮೇಲೆ ಕಾಡಾನೆ ದಾಳಿ ನಡೆಸಿದೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ದಂಪತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗಂಡ ಹೆಂಡತಿಯ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ನಾಗವಲ್ಲಿ ಮತ್ತು ಗಂಡುಗುಸೆ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಹಗರೆಯಿಂದ ದಂಪತಿ ಕೆಲಸ ಅರಸಿ ಚಿಕ್ಕಮಗಳೂರಿಗೆ ಬಂದಿದ್ದರು ಎನ್ನಲಾಗಿದೆ.

ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟಗೆ ತೆಗೆದುಕೊಂಡಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿರುವ ಆನೆಗಳನ್ನು ಸ್ಥಳಾಂತರಿಸುವಂತೆಯೂ ಒತ್ತಾಯಿಸಿದ್ದಾರೆ.

bengaluru

ಇದನ್ನೂ ಓದಿ: ಮಡಿಕೇರಿ: ಕಾಡಾನೆ ದಾಳಿಗೆ ಬಡ ದಿನಗೂಲಿ ಸಾವು

ಮೊನ್ನೆಯಷ್ಟೇ, ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರನ್ನು ಹಿಂಬಾಲಿಸಿದ್ದರು ಮತ್ತು ಥಳಿಸಿದ್ದರು.
ಕಾಡಾನೆಗಳಿಂದ ಜನರಿಗೆ ಪರಿಹಾರ ದೊರಕದಿದ್ದರೆ, ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ಹೇಳಿದ್ದರು.

ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಆನೆ ಭೈರಾನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆನೆಗಳ ಹಾವಳಿ ಮತ್ತೆ ಮರುಕಳಿಸಿದ್ದರಿಂದ ಜನರು ಆಂತಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ಮೂಡಿಗೆರೆ: ಕಾಡಾನೆ ದಾಳಿಗೆ ಮಹಿಳೆ ಬಲಿ; ಶಾಸಕ ಎಂ.ಪಿ ಕುಮಾರಸ್ವಾಮಿಗೆ ಹಿಗ್ಗಾ-ಮುಗ್ಗಾ ಥಳಿಸಿದ ಗ್ರಾಮಸ್ಥರು!

ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ಆನೆ ಭೈರಾವನ್ನು ಅರಣ್ಯ ಅಧಿಕಾರಿಗಳು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆನೆಗಳ ಹಾವಳಿ ಮತ್ತೆ ಮರುಕಳಿಸಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

bengaluru

LEAVE A REPLY

Please enter your comment!
Please enter your name here