Home Uncategorized ಚಿಲುಮೆ ಸಂಸ್ಥೆ ವೋಟರ್ ಐಡಿ ಅಕ್ರಮ: ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್​ ಬಾದು...

ಚಿಲುಮೆ ಸಂಸ್ಥೆ ವೋಟರ್ ಐಡಿ ಅಕ್ರಮ: ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್​ ಬಾದು ಸಭೆ ಆರಂಭ

58
0

ಬೆಂಗಳೂರು: ಚಿಲುಮೆ ಸಂಸ್ಥೆ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೇಂದ್ರ ಚುನಾವಣಾ ಆಯೋಗವೂ ಅಖಾಡಕ್ಕೆ ಇಳಿದಿದೆ. ಬಿಬಿಎಂಪಿ ವಿರುದ್ಧ ಕೇಳಿ ಬಂದ ಆರೋಪದ ಸಂಬಂಧ ತನಿಖೆ ಶುರುವಾಗಲಿದ್ದು, ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್​ ಬಾದು ಸಭೆ ನಡೆಸುತ್ತಿದ್ದಾರೆ. ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​​, ಬಿಬಿಎಂಪಿಯ ಚುನಾವಣಾ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಚಿಲುಮೆ ಸಂಸ್ಥೆ ಮತದಾರರ ಪಟ್ಟಿಯಲ್ಲಿ ಗೋಲ್ ಮಾಲ್ ಮಾಡಿದೆ ಅಂತ ದೂರು ಬಂದ ಹಿನ್ನೆಲೆ ಬೆಂಗಳೂರಿನ 28 ಕ್ಷೇತ್ರಗಳ ಮತದಾರ ನೋಂದಣಾಧಿಗಳ ಕಚೇರಿಗಳಿಗೆ ಚುನಾವಣಾ ಆಯೋಗದ ಉಪ ಆಯುಕ್ತರು ಭೇಟಿ ನೀಡುವ ಸಾಧ್ಯತೆ ಇದೆ. 13-1-2022 ರಿಂದ ಇದೂವರೆಗೂ ಮತದಾರರ ಪಟ್ಟಿಗೆ ಸೇರ್ಪಡೆ, ತೆಗದು ಹಾಕಿರುವ, ತಿದ್ದುಪಡಿ ದಾಖಲೆಗಳನ್ನ ಪರಿಶೀಲನೆ ನಡೆಸಲಿದ್ದಾರೆ. ಈ ಬಾರಿ ಬೆಂಗಳೂರಿನ 28 ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಸೇರ್ಪಡೆ ಹಾಗೂ ಡಿಲಿಟ್ ಆಗಿರೋ ವಿಚಾರ, ಚಿಲುಮೆ ಸಂಸ್ಥೆ ವಿರುದ್ಧ ಕೇಳಿ ಬಂದಿರೋ ಅರೋಪದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಂದ್ರ ಮುಖ್ಯ ಚುನಾವಣಾ ಅಧಿಕಾರಿಗೆ ವರದಿ ನೀಡಲು ಚುನಾವಣಾ ಆಯೋಗ ಮುಂದಾಗಿದೆ. 2017ರಲ್ಲೇ ಅಧಿಕಾರಿಗಳಿಂದ ಚಿಲುಮೆ ಸಂಸ್ಥೆಗೆ ಸಂಪೂರ್ಣ ಅಧಿಕಾರ

2017ರಲ್ಲಿ ಅಧಿಕಾರಿಗಳಿಂದ್ಲೇ ಚಿಲುಮೆ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡಿರೋ ವಿಚಾರ ಸ್ಫೋಟಗೊಂಡಿದೆ. ಅಂದ್ರೆ ಸರ್ವೇ ಮಾಡುವ ಹುಡಗರನ್ನ ನೇಮಿಸಿಕೊಳ್ಳೋದು. BLO ನೇಮಕ ಮಾಡುವ ಅಧಿಕಾರವನ್ನ ಚಿಲುಮೆಗೆ ನೀಡಿದ್ರು ಅನ್ನೋದು ಗೊತ್ತಾಗಿದೆ. ಅಷ್ಟಕ್ಕೂ 2017ರಲ್ಲಿ ಎಲೆಕ್ಷನ್ ಅಭಿಯಾನಕ್ಕೆ ಚಿಲುಮೆ ಸಂಸ್ಥೆ ಅನುಮತಿ ಪಡೆದಿತ್ತು. ಅಂದು ಮಹದೇವಪುರ ತಹಶೀಲ್ದಾರ್ ಒಬ್ಬರು ಚಿಲುಮೆ ಸಂಸ್ಥೆಗೆ ಅಧಿಕಾರ ನೀಡಿದ ಆದೇಶದ ಎಡವಟ್ಟು ಈಗ ಬಲಾಗಿದೆ. ಅಂದ್ರೆ BLO ನೇಮಕದ ಅಧಿಕಾರವನ್ನ ಅಂದಿನ ತಹಶೀಲ್ದಾರ್ ಚಿಲುಮೆ ಸಂಸ್ಥೆಗೆ ನೀಡಿದ್ರು. ಅಂದಿನ ತಹಶೀಲ್ದಾರ್ ಆದೇಶದ ಬಗ್ಗೆ ಈಗಿನ ಬೆಂಗಳೂರು ನಗರ ಡಿಸಿಯಿಂದ ವರದಿ ನೀಡಲಾಗಿದ್ದು, 2017ರಲ್ಲಿದ್ದ ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ಉಲ್ಲೇಖಿಸಲಾಗಿದೆ.

ಪತ್ತೆಯಾದ BLO ಕಾರ್ಡ್​ಗಳು FSLಗೆ ರವಾನೆ

ಸದ್ಯ ಪೊಲೀಸರು ಚಿಲುಮೆ ಸಂಸ್ಥೆಯಲ್ಲಿ ಸಿಕ್ಕ BLO ಐಡಿ ಕಾರ್ಡ್​ಗಳ ಅಸಲಿ ಬಣ್ಣ ಬಯಲು ಮುಂದಾಗಿದೆ. ಸಿಕ್ಕ 60 ಐಡಿ ಕಾರ್ಡ್​ಗಳನ್ನ FSLಗೆ ಕಳುಹಿಸಿದ್ದು, ಇನ್ನೆರಡು ದಿನಗಳಲ್ಲಿ ಮಾಹಿತಿ ಬರೋ ಸಾಧ್ಯತೆ ಇದೆ.ಒಂದ್ವೇಳೆ ಐಡಿಯಲ್ಲಿರೋ ಸೀಲ್ ಮತ್ತು ಸಹಿ ಅಸಲಿಯಂತಾದ್ರೆ ಬಿಬಿಎಂಪಿ ಅಧಿಕಾರಿಗಳಿಗೆ ಕಂಠಕವಾಗಲಿದೆ.ಇಲ್ಲವಾದಲ್ಲಿ ಅದು ಹಗರಣದ ಮತ್ತೊಬ್ಬ ಕಿಂಗ್​ಪಿನ್ ಲೋಕೇಶ್​ನ ಕಳ್ಳಾಟದಲ್ಲಿ ತಯಾರಾಗಿದ್ದಾ ಅನ್ನೋ ಬಗ್ಗೆ ತನಿಖೆ ನಡೆಯಲಿದೆ‌. ಹೀಗಾಗಿ ಸದ್ಯ ಪೊಲೀಸರ ಚಿತ್ತ FSL ವರದಿಯ ಕಡೆ ನೆಟ್ಟಿದೆ.

LEAVE A REPLY

Please enter your comment!
Please enter your name here