Home Uncategorized ಚೈತ್ರಾ ಕುಂದಾಪುರ ಕೇಸ್: ಗುರುತು ಸಿಗದಂತೆ ಟಿ ಶರ್ಟ್- ಚಡ್ಡಿ ಧರಿಸಿದ್ದ ಹಾಲವೀರಪ್ಪ ಸ್ವಾಮೀಜಿ!

ಚೈತ್ರಾ ಕುಂದಾಪುರ ಕೇಸ್: ಗುರುತು ಸಿಗದಂತೆ ಟಿ ಶರ್ಟ್- ಚಡ್ಡಿ ಧರಿಸಿದ್ದ ಹಾಲವೀರಪ್ಪ ಸ್ವಾಮೀಜಿ!

6
0
Advertisement
bengaluru

ಇತ್ತೀಚಿಗೆ ಕಾವಿ ತೊಟ್ಟು ಸ್ವಾಮೀಜಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಬಿಜೆಪಿ ಟಿಕೆಟ್ ವಂಚನೆ ಪ್ರಕರಣ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಒಡಿಶಾದಲ್ಲಿ ಬಂಧಿಸಲಾಗಿದೆ.  ಬೆಂಗಳೂರು: ಇತ್ತೀಚಿಗೆ ಕಾವಿ ತೊಟ್ಟು ಸ್ವಾಮೀಜಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಬಿಜೆಪಿ ಟಿಕೆಟ್ ವಂಚನೆ ಪ್ರಕರಣ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. 

ಬಂಧನ ಭೀತಿಯಲ್ಲಿ ಬೆಂಗಳೂರು ತೊರೆದು ಒಡಿಶಾದ ಕಟಕ್ ಗೆ ಹೋಗಿದ್ದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಅಲ್ಲಿನ ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿದ ಸಿಸಿಬಿ ಪೊಲೀಸರು, ಅವರನ್ನು ನಗರಕ್ಕೆ ಕರೆತಂದಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ, ಬುಧವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಗುರುತು ಸಿಗಬಾರದೆಂದು ಕಾವಿ ಬಟ್ಟೆ ಕಳಚಿಟ್ಟಿದ್ದ ಸ್ವಾಮೀಜಿ, ಟಿ ಶರ್ಟ್- ಜರ್ಕಿನ್, ಹಾಗೂ ಚಡ್ಡಿ  ಮಾತ್ರ ಧರಿಸಿದ್ದರು. ಅದೇ ವೇಷದಲ್ಲಿ  ನಗರದಿಂದ ನಗರಕ್ಕೆ ಸಾಮಾನ್ಯ ವ್ಯಕ್ತಿಯಂತೆ ಸಂಚರಿಸುತ್ತಿದ್ದರು ಎನ್ನಲಾಗಿದೆ. 


bengaluru

LEAVE A REPLY

Please enter your comment!
Please enter your name here