Home Uncategorized ಜನವರಿ ಒಂದೇ ತಿಂಗಳಿನಲ್ಲಿ ರೂ.6.7 ಲಕ್ಷ ದಂಡ ಸಂಗ್ರಹಿಸಿದ ಬಿಎಂಟಿಸಿ

ಜನವರಿ ಒಂದೇ ತಿಂಗಳಿನಲ್ಲಿ ರೂ.6.7 ಲಕ್ಷ ದಂಡ ಸಂಗ್ರಹಿಸಿದ ಬಿಎಂಟಿಸಿ

5
0
bengaluru

ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿರುವ ಬಿಎಂಟಿಸಿ, ದಂಡದ ರೂಪದಲ್ಲಿ ಜನವರಿ ಒಂದೇ ತಿಂಗಳಿನಲ್ಲಿ 6.77 ಲಕ್ಷ ರುಪಾಯಿಗಳನ್ನು ಸಂಗ್ರಹಿಸಿದೆ. ಬೆಂಗಳೂರು: ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿರುವ ಬಿಎಂಟಿಸಿ, ದಂಡದ ರೂಪದಲ್ಲಿ ಜನವರಿ ಒಂದೇ ತಿಂಗಳಿನಲ್ಲಿ 6.77 ಲಕ್ಷ ರುಪಾಯಿಗಳನ್ನು ಸಂಗ್ರಹಿಸಿದೆ.

ಬಿಎಂಟಿಸಿ ಸಂಸ್ಥೆಯ ತನಿಖಾ ತಂಡಗಳು 2023ರ ಜನವರಿ ತಿಂಗಳಿನಲ್ಲಿ ಒಟ್ಟು 16,226 ಟ್ರಿಪ್‌ಗಳನ್ನು ತಪಾಸಣೆ ಮಾಡಿದ್ದು, ಈ ವೇಳೆ 3591 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದೆ. ಇದರಿಂದ ಒಟ್ಟು ರೂ. 6,77,190 ದಂಡ ವಸೂಲಿಯಾಗಿದೆ. ಸಂಸ್ಥೆಯ ನಿರ್ವಾಹಕರ ವಿರುದ್ಧ 1,521 ಪ್ರಕರಣಗಳ ದಾಖಲಾಗಿದೆ.

ಮೋಟಾರು ವಾಹನ ಕಾಯ್ದೆ 1988ರ ಕಾಲಂ177 ಮತ್ತು 94 ರ ಪ್ರಕಾರ ದಂಡ ವಸೂಲಿ ಮಾಡಲಾಗಿದ್ದು, ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 322 ಪುರುಷ ಪ್ರಯಾಣಿಕರಿಂದ ಒಟ್ಟು 32,200 ರೂ ಸಂಗ್ರಹವಾಗಿದೆ.

ಪ್ರಯಾಣಿಕರು ಬಿಎಂಟಿಸಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಬೇಕಿದೆ. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದು. ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗಲಿದೆ.

bengaluru

ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಜಾಗದಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಬಿಎಂಟಿಸಿಯಿಂದ ಪ್ರಕಟಣೆ ತಿಳಿಸಿದೆ.

bengaluru

LEAVE A REPLY

Please enter your comment!
Please enter your name here