Home Uncategorized ಜಮೀರ್ ಅಹಮದ್ ಮಣಿಸಲು ಸೈಲೆಂಟ್ ಸುನೀಲ್​ ಜೊತೆ ಕೈ ಜೊಡಿಸಿದ್ರಾ ಇಮ್ರಾನ್ ಪಾಷಾ, ಇಲ್ಲಿದೆ ಸ್ಪಷ್ಟನೆ

ಜಮೀರ್ ಅಹಮದ್ ಮಣಿಸಲು ಸೈಲೆಂಟ್ ಸುನೀಲ್​ ಜೊತೆ ಕೈ ಜೊಡಿಸಿದ್ರಾ ಇಮ್ರಾನ್ ಪಾಷಾ, ಇಲ್ಲಿದೆ ಸ್ಪಷ್ಟನೆ

51
0
Advertisement
bengaluru

ಬೆಂಗಳೂರು: ಸೈಲೆಂಟ್ ಸುನೀಲ್(Silent Sunil) ರಾಜಕೀಯ ನಾಯಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೊಮ್ಮೆ ಸೈಲೆಂಟ್ ಸುನೀಲ್ ಹೆಸ್ರು ಮುಂಚೂಣಿಗೆ ಬಂದಿದೆ. ಅದು ಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್ ಖಾನ್(Zameer Ahmad Khan) ಮಣಿಸಲು ಸೈಲೆಂಟ್ ಸುನೀಲ್ ನ್ನ ಮಾಜಿ ಕಾರ್ಪೋರೆಟರ್ ಇಮ್ರಾನ್ ಪಾಷಾ(Imran Pasha) ಭೇಟಿಯಾದ್ರು ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಇದಕ್ಕೆಲ್ಲ ಇಮ್ರಾನ್ ಪಾಷಾ ತೆರೆ ಎಳೆದಿದ್ದಾರೆ.

ಜಮೀರ್ ಮಣಿಸಲು ಒಂದಾದ್ರಾ ಇಮ್ರಾನ್ ಪಾಷಾ ಹಾಗೂ ರೌಡಿಶೀಟರ್

ಶಾಸಕ ಜಮೀರ್ ಹಣಿಯಲು ಸೈಲೆಂಟ್ ಸುನೀಲ್ ಅಸ್ತ್ರ ಬಳಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಾದರಾಯನಪುರ ಮಾಜಿ ಕಾರ್ಪೋರೆಟರ್ ಇಮ್ರಾನ್ ಪಾಷಾ ರಿಂದ ಸೈಲೆಂಟ್ ಸುನೀಲ್ ಗೆ ಬೆಂಬಲ ಎಂಬ ಟ್ಯಾಗ್ ಲೈನ್‌ಮೂಲಕ ಫೋಟೋಗಳು ವೈರೆಲ್ ಆಗಿದೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಸುನೀಲ ಹಾಗೂ ಇಮ್ರಾನ್ ಪಾಷಾ ಭೇಟಿಗೆ ಅರ್ಥ ಕಲ್ಪಿಸಲಾಗುತ್ತಿದೆ. ಸೈಲೆಂಟ್ ಆಗಿಯೇ ಈ ಬಾರಿ ಚಾಮರಾಜಪೇಟೆಯಲ್ಲಿ ಜಮೀರ್ ಅಹಮ್ಮದ್ ಖಾನ್ ಹಣಿಯಲು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಗುಲ್ ಎದ್ದಿದೆ.

ಇದನ್ನೂ ಓದಿ: ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!

bengaluru bengaluru

ಇಮ್ರಾನ್ ಪಾಷ ತಂದೆಗೆ ಜಮೀರ್ ಭರವಸೆ

ಚುನಾವಣೆ ಸಮೀಪಿಸುತ್ತಲೇ ರೌಡಿಶೀಟರ್ ನಾಯಕರ ಫೋಟೋಗಳು ವೈರೆಲ್ ಆಗಿವೆ. ಹೀಗಿರುವಾಗ ಇಮ್ರಾನ್ ಪಾಷಾ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕಾರ ನಾನೇ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಹೀಗಿರುವಾಗ ನಾನು ಯಾಕೆ ಬೇರೆಯವರಿಗೆ ಸಹಾಯ ಮಾಡ್ಲಿ? ನಮ್ಮದೊಂದು ಫೋಟೋ ವೈರಲ್ ಮಾಡಿದ್ದಾರೆ. 2018 ರಲ್ಲಿ ಜಮೀರ್ ನಮ್ಮ ತಂದೆಗೆ ಕರೆ ಮಾಡಿದ್ರು.ನನ್ನ ಜೊತೆ ಜಮೀರ್ ಮಾತಾಡಬೇಕು ಎಂದಿದ್ರು. ನಮ್ಮ ಸಮುದಾಯದ ಮುಖಂಡರು, ನಮ್ಮ‌ ಕುಟುಂಬಸ್ಥರ ಮುಂದೆ ಜಮೀರ್ ಅಹ್ಮದ್ ಮನವಿ ಮಾಡಿದ್ರು. ಈ ಬಾರಿ ನನಗೆ ಬಿಟ್ಟುಕೊಡು, ಮುಂದಿನ ಬಾರಿ ಇಮ್ರಾನ್ ನ ಎಂಎಲ್​ಎ ಆಗಿ ನೋಡ್ತೇನೆ ಎಂದಿದ್ರು.

ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸಾಕಷ್ಟು ಚರ್ಚೆಗಳು ಇದೆ. ಹೀಗಿರುವಾಗ ನಮಗೆ ಭರವಸೆ ಇದೆ ಜಮೀರ್ ಅಹ್ಮದ್ ಖಾನ್ ಕೊಟ್ಟ ಮಾತು ತಪ್ಪುವುದಿಲ್ಲ. ಜಮೀರ್ ಬೆಳೆದಿದ್ದಾರೆ, ಕಾಂಗ್ರೆಸ್ ನ ಸ್ಟಾರ್ ಕ್ಯಾಂಪೇನರ್ ಅವರು. ಮುಂದೆ ಎಂಎಲ್​ಸಿ ಆಗಿ ಮಂತ್ರಿ ಆಗ್ಲಿ ನಾವು ಚಾಮರಾಜಪೇಟೆಯಲ್ಲಿ ಸ್ಪರ್ಧೆ ಮಾಡ್ತೇವೆ ಎಂದರು.

ಇದನ್ನೂ ಓದಿ: ಪ್ರತಿ ಚುನಾವಣೆಯಲ್ಲಿ ನಾನು ಪಡೆಯುವ ವೋಟು-ಪ್ರಮಾಣ ಜಾಸ್ತಿಯಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಜಮೀರ್ ಅಹ್ಮದ್

ಹೀಗೆ ಚಾಮರಾಜಪೇಟೆ ಫಂಕ್ಷನ್ ನಲ್ಲಿ ಸೈಲೆಂಟ್ ಸುನೀಲ್ ಕಾಣಿಸಿಕೊಂಡದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೀಗೆ ಅದೇ ಕ್ಷೇತ್ರದ ಆಕಾಂಕ್ಷಿಗಳ ಜತೆಗೂ ಇರಿವುದು ಹೊಸ ಹೊಸ ಆಯಾಮ ಪಡೆಯುತ್ತಿದೆ. ಅದ್ರಲ್ಲೂ ಜಮೀರ್ ಹೀಗೊಂದು ಭರವಸೆ ಕೊಟ್ರಾ. ಹಾಗಾದ್ರೇ ಈ ಬಾರಿ ಎಲೆಕ್ಷನ್ ಕಣದಿಂದ ಹಿಂದೆ ಸರಿಯುತ್ತಾರಾ ಎಂಬ ಚರ್ಚೆಗಳೆಲ್ಲ ಶುರುವಾಗಿದೆ.

ವರದಿ: ಮುತ್ತಪ್ಪ‌ ಲಮಾಣಿ, ಟಿವಿ9 ಬೆಂಗಳೂರು


bengaluru

LEAVE A REPLY

Please enter your comment!
Please enter your name here