Home Uncategorized ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ ನಿವಾಸದ ಮೇಲೆ ಐಟಿ ದಾಳಿ 

ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ ನಿವಾಸದ ಮೇಲೆ ಐಟಿ ದಾಳಿ 

14
0
bengaluru

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಫೆ.15 ರಂದು ಜೆಡಿಎಸ್ ನಾಯಕ ಪ್ರಭಾಕರ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.  ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಫೆ.15 ರಂದು ಜೆಡಿಎಸ್ ನಾಯಕ ಪ್ರಭಾಕರ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. 

ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಮೈಲಸಂದ್ರದಲ್ಲಿರುವ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು, ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಕಚೇರಿ, ಕೋಣನಕುಂಟೆಯಲ್ಲಿರುವ ಫ್ಲಾಟ್ ಮೇಲೆಯೂ ದಾಳಿ ನಡೆದಿದೆ. 

ಪ್ರಭಾಕರ ರೆಡ್ಡಿ ರಿಲಯ್ ಎಸ್ಟೇಟ್ ಉದ್ಯಮಿಯಾಗಿದ್ದು, ಈ ಹಿಂದೆಯೂ ಹಲವು ಬಾರಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು, ವಿಧಾನಸಭಾ ಚುನಾವಣೆ-2023 ರಲ್ಲಿ ಪ್ರಭಾಕರ ರೆಡ್ಡಿ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. 

ಪ್ರಭಾಕರ್ ರೆಡ್ಡಿ ಉದ್ಯಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದ್ದರೆ, ಚುನಾವಣೆ ಸಂದರ್ಭದಲ್ಲಿ ಇಂತಹ ದಾಳಿಗಳು ಸಾಮಾನ್ಯ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 
 

bengaluru
bengaluru

LEAVE A REPLY

Please enter your comment!
Please enter your name here