Home Uncategorized ಟಿಪ್ಪು ಖಡ್ಗದಲ್ಲಿರುವ ಬರಹದ ಬಗ್ಗೆ ಸುಳ್ಳು ಹೇಳಿದ ನಿರೂಪಕ ಅಜಿತ್ ಹನುಮಕ್ಕನವರ್

ಟಿಪ್ಪು ಖಡ್ಗದಲ್ಲಿರುವ ಬರಹದ ಬಗ್ಗೆ ಸುಳ್ಳು ಹೇಳಿದ ನಿರೂಪಕ ಅಜಿತ್ ಹನುಮಕ್ಕನವರ್

31
0

ಬೆಂಗಳೂರು: ಪತ್ರಕರ್ತ ಅಜಿತ್ ಹನುಮಕ್ಕನವರ್ ತನ್ನ ಟಿವಿ ಕಾರ್ಯಕ್ರಮದಲ್ಲಿ ಅವಕಾಶ ನೀಡಿದರೆ ಸಾವರ್ಕರ್ ಪೋಟೋ ತೆರವುಗೊಳಿಸುತ್ತೇನೆ ಎಂದಿದ್ದ ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸುವ ವೇಳೆ ಟಿಪ್ಪು ಟಿಪ್ಪು ಖಡ್ಗದ ವಿಚಾರ ಎಳೆದು ತಂದು ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ.

“ಬೆಳಗಾವಿಯ ಸುವರ್ಣಸೌಧದ ವಿಧಾನಸಭೆ ಸಭಾಂಗಣದಿಂದ ಸಾವರ್ಕರ್ ಫೋಟೋ ತೆಗೆಯುವುದು ಸೂಕ್ತವಾಗಿದ್ದು, ಒಂದು ವೇಳೆ ನನಗೆ ಬಿಟ್ಟರೆ ಇವತ್ತೇ ತೆರವು ಮಾಡುತ್ತೇನೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಜಿತ್ ಹನುಮಕ್ಕನವರ್, ತನ್ನ ಟಿವಿ ಕಾರ್ಯಕ್ರಮದಲ್ಲಿ ಸಾವರ್ಕರ್ ಗೆ ಬೆಂಬಲ ವ್ಯಕ್ತಪಡಿಸಿ, ಅವರು ಜೈಲಿನಲ್ಲಿದ್ದ ಸಂದರ್ಭವನ್ನು ವಿವರಿಸಿದರು. ನಂತರ ಟಿಪ್ಪು ಖರ್ಡದ ಕುರಿತು ಸುಳ್ಳು ಹೇಳಿದ್ದಾರೆ.

ಅಜಿತ್ ಹನುಮಕ್ಕನವರ್ ಹೇಳಿದ್ದೇನು?

“ಕಾಫಿರರ ಮೇಲೆ ಸಿಡಿಲಿನಂತೆ ಎರಗಿದ ಖಡ್ಗ ಎಂದು ತನ್ನ ಖಡ್ಗದಲ್ಲಿ ಬರೆದಿದ್ದ ಟಿಪ್ಪು ಸುಲ್ತಾನ್‌ ಅವರ ಜಯಂತಿಯನ್ನು ಸರ್ಕಾರದ ಖರ್ಚಿನಲ್ಲಿ ಮಾಡುವಾಗ ಯಾರಿಗೂ ಯಾವ ಆಕ್ಷೇಪಗಳು ಇರಲಿಲ್ಲ. ಟಿಪ್ಪುವಿನ ಪರಮ ಆರಾಧಕರು ಕೂಡಾ ಟಿಪ್ಪುವಿನ ಖಡ್ಗದಲ್ಲಿ ಆ ರೀತಿ ಬರೆದಿರಲಿಲ್ಲ ಎಂದು ಹೇಳುವುದಿಲ್ಲ. ಕಾಫಿರರೆಂದರೆ ಬಹು ದೇವಾರಾಧಕರು, ಬಹುದೇವಾರಧಕರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ ಎಂದು ಟಿಪ್ಪು ಸುಲ್ತಾನ್‌ ತನ್ನ ಖಡ್ಗದ ಮೇಲೆ ಬರೆದಿದ್ದರು” ಎಂದು ಅಜಿತ್‌ ಹನುಮಕ್ಕನವರ್‌ ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದರು.

ವಾಸ್ತವವೇನು?

ಪತ್ರಕರ್ತ ಅಜಿತ್ ಹನುಮಕ್ಕನವರ್ ಟಿಪ್ಪು ಖಡ್ಗದ ಕುರಿತು ಹೇಳಿದ್ದು ಸಂಪೂರ್ಣ ಸುಳ್ಳು. ವಾಸ್ತವದಲ್ಲಿ ಟಿಪ್ಪು ಖಡ್ಗದಲ್ಲಿ ಅರಬಿ ಲಿಪಿಯಲ್ಲಿ ಬರೆದಿರುವುದು “ಯಾ ನಸೀರ್, ಯಾ ಫತಾಹ್, ಯಾ ನಸೀರ್, ಯಾ ಮುಈನ್” ಎಂದಾಗಿದೆ. ಮತ್ತು ಅದರ ಹಿಡಿಕೆಯ ಎರಡೂ ತುದಿಗಳಲ್ಲಿ ಯಾ ಅಲ್ಲಾಹ್..‌ ಯಾ ಅಲ್ಲಾಹ್… ಎಂದು ಬರೆಯಲಾಗಿದೆ. ಅದರಲ್ಲಿ ಎಲ್ಲೂ ಅಜಿತ್ ಅವರು ಹೇಳಿದಂತೆ ಕಾಫಿರ್ ಎಂಬ ಅರಬಿಕ್‌ ಪದ ಬಳಸಲಾಗಿಲ್ಲ.

ಟಿಪ್ಪುವಿನ ಖಡ್ಗದ ಮೇಲಿರುವ ಅರಬಿಕ್ ಪದಗಳು ಅಲ್ಲಾಹನ 99 ನಾಮಗಳಲ್ಲಿ ಕೆಲವು. ಅವುಗಳ ಅರ್ಥ “ಯಾ ನಸೀರ್ = ಓ ಸಹಾಯ ನೀಡುವವನೇ”, “ಯಾ ಫತಾಹ್ = ಯಶಸ್ಸು ನೀಡುವವನೇ”, ಯಾ ಝಹೀರುಲ್ಲಾಹ್ = “ಬೆಳಕು ತೋರುವವನೇ” ಎಂದಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತ ತನ್ನ ಕಾರ್ಯಕ್ರಮಲ್ಲಿ ಸುಳ್ಳು ಮಾಹಿತಿ ನೀಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here