Home Uncategorized ಟೆಕ್ಕಿಯಲ್ಲಿ ಓಮಿಕ್ರಾನ್ ರೂಪಾಂತರಿ ಬಿಎಫ್.7.4 ಪತ್ತೆ?: ನಗರದಲ್ಲಿ ಹೆಚ್ಚಿದ ಕೋವಿಡ್ ಆತಂಕ

ಟೆಕ್ಕಿಯಲ್ಲಿ ಓಮಿಕ್ರಾನ್ ರೂಪಾಂತರಿ ಬಿಎಫ್.7.4 ಪತ್ತೆ?: ನಗರದಲ್ಲಿ ಹೆಚ್ಚಿದ ಕೋವಿಡ್ ಆತಂಕ

26
0

ಡಿಸೆಂಬರ್‌ನಲ್ಲಿ ಜರ್ಮನಿಯಿಂದ ಆಗಮಿಸಿದ ಅಂತರಾಷ್ಟ್ರೀಯ ಪ್ರಯಾಣಿಕರೊಬ್ಬರ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್’ನ ಬಿಎಫ್ 7.4 ಪತ್ತೆಯಾಗಿದ್ದು, ಈ ಬೆಳವಣಿಗೆ ನಗರದಲ್ಲಿ ಮಹಾಮಾರಿ ಕೋವಿಡ್ ಕುರಿತು ಆತಂಕ ಹೆಚ್ಚಾಗುವಂತೆ ಮಾಡಿದೆ. ಬೆಂಗಳೂರು: ಡಿಸೆಂಬರ್‌ನಲ್ಲಿ ಜರ್ಮನಿಯಿಂದ ಆಗಮಿಸಿದ ಅಂತರಾಷ್ಟ್ರೀಯ ಪ್ರಯಾಣಿಕರೊಬ್ಬರ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್’ನ ಬಿಎಫ್ 7.4 ಪತ್ತೆಯಾಗಿದ್ದು, ಈ ಬೆಳವಣಿಗೆ ನಗರದಲ್ಲಿ ಮಹಾಮಾರಿ ಕೋವಿಡ್ ಕುರಿತು ಆತಂಕ ಹೆಚ್ಚಾಗುವಂತೆ ಮಾಡಿದೆ.

ಈ ಹೊಸ ರೂಪಾಂತರಿಯು ಒಮಿಕ್ರಾನ್‌ನ ಬಿಎ.5ಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಹೊಸ ರೂಪಾಂತರಿ ವೈರಲ್ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ ರಂದೀಪ್ ಅವರು ಪ್ರತಿಕ್ರಿಯೆ ನೀಡಿ, ಯಾವುದೇ ಹೊಸ ರೂಪಾಂತರಿ ವೈರಸ್ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಜರ್ಮನಿಯಿಂದ ಹಿಂದಿರುಗಿದ 35 ವರ್ಷದ ವ್ಯಕ್ತಿಯನ್ನು ನಿಯಮಗಳ ಅನುಸಾರ ಡಿಸೆಂಬರ್‌ ತಿಂಗಳಿನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಬಳಿಕ ಮಾದರಿಯನ್ನು ಜೀನೋಮಿಕ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ. ಪರೀಕ್ಷೆ ವೇಳೆ ಸಮಯದಲ್ಲಿ, ನಾವು ಹೊಸ ರೂಪಾಂತರಿ ವೈರಸ್ BF.7.4 ಕಂಡು ಬಂದಿದೆ, ಇದು BA.5 ರೂಪಾಂತರಿ ವೈರಸ್’ಗೆ ಸೇರಿದ ಉಪ-ವಂಶವಾಗಿದೆ ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.

ಸೋಂಕಿನಿಂದ ಬಳಲುತ್ತಿದ್ದ ಟೆಕ್ಕಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಟೆಕ್ಕಿಯಲ್ಲಿ ಪತ್ತೆಯಾದ ಬಿಎಫ್.7.4 ರೂಪಾಂತರಿ ವೈರಸ್ ಅಪಾಯಕಾರಿ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಬಿಎ.5 ಪ್ರಕರಣಗಳು ಪತ್ತೆಯಾಗಿದ್ದವು. ಬಿಎಫ್.7.4 ರೂಪಾಂತರಿ ವೈರಲ್ ಈ ವೈರಸ್’ಗೆ ಸೇರಿದ ತಳಿಯಾಗಿದ್ದು, ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಮಾತನಾಡಿ, ಈಗಾಗಲೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಈ ವೈರಸ್ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಪರಿಸ್ಥಿತಿ ಬದಲಾವಣೆ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮಗಳ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಬೂಸ್ಟರ್ ಡೋಸ್‌ನ ಪರಿಣಾಮಕಾರಿತ್ವ ಕುರಿತು ಅಧ್ಯಯನ ನಡೆಸಲು ಜಯದೇವ ಆಸ್ಪತ್ರೆ ಮುಂದು
ಈ ನಡುವೆ ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SJICR) ಬೂಸ್ಟರ್ ಡೋಸ್ ಲಸಿಕೆಯ ಪರಿಣಾಮಕಾರಿತ್ವವನ್ನು ಅಧ್ಯಯನ ನಡೆಸಿದೆ.

ಸೆಪ್ಟೆಂಬರ್ 2021 ರಲ್ಲಿ, SJICR ವೈದ್ಯರು ಮತ್ತು ನರ್ಸ್ ಗಳು ಸೇರಿದಂತೆ 250 ಆರೋಗ್ಯ ಕಾರ್ಯಕರ್ತರಲ್ಲಿ ಅಧ್ಯಯನವನ್ನು ನಡೆಸಲಾಗಿದ್ದು, ಎರಡನೇ ಕೋವಿಡ್‌ಶೀಲ್ಡ್ ಡೋಸ್ ನಂತರ ಶೇ.99 ರಷ್ಟು ಪ್ರತಿಕಾಯಗಳು ಹಾಗೇ ಇರುವುದನ್ನು ಪತ್ತೆ ಮಾಡಿದೆ. ಮುಂಬರುವ ಅಧ್ಯಯನವು ಬೂಸ್ಟರ್ ಶಾಟ್ ತೆಗೆದುಕೊಂಡವರಲ್ಲಿ SARS-CoV-2 ವಿರೋಧಿ ಪ್ರತಿಕಾಯಗಳ ಮಟ್ಟವನ್ನು ವೈಜ್ಞಾನಿಕವಾಗಿ ನಿರ್ಣಯಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

“ದೇಹದಲ್ಲಿ ಎರಡು ರೀತಿಯ ಪ್ರತಿರಕ್ಷಣಾ ವ್ಯವಸ್ಥೆಗಳಿವೆ – ಬಿ ಮತ್ತು ಟಿ ಜೀವಕೋಶಗಳು. ಅವುಗಳಲ್ಲಿ, ಬಿ ಜೀವಕೋಶದ ಪ್ರತಿರಕ್ಷೆಯನ್ನು ಸುಲಭವಾಗಿ ಅಳೆಯಬಹುದು. ಎರಡನೇ ಡೋಸ್ ಲಸಿಕೆ ಪಡೆದ 9-10 ತಿಂಗಳ ನಂತರ ಪ್ರತಿಕಾಯಗಳು ಕ್ಷೀಣಿಸಬಹುದು. ಪ್ರತಿರಕ್ಷೆ ಹೆಚ್ಚಿಸಿಕೊಳ್ಳಲು ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳುವುದನ್ನು ಅಧ್ಯಯನ ಶಿಫಾರಸು ಮಾಡಿದೆ.

ಬೂಸ್ಟರ್ ಡೋಸ್ ತೆಗೆದುಕೊಂಡವರಲ್ಲಿ ಪ್ರತಿಕಾಯಗಳ ಮಟ್ಟವನ್ನು ವೈಜ್ಞಾನಿಕವಾಗಿ ನಿರ್ಣಯಿಸಲು, ಲಸಿಕೆ ಪಡೆದುಕೊಂಡ 250 ಸಿಬ್ಬಂದಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು ಎಂದು ರಾಜ್ಯದ ಕ್ಲಿನಿಕಲ್ ತಜ್ಞರ ಸಮಿತಿಯ ಸದಸ್ಯರೂ ಆಗಿರುವ SJICR ನಿರ್ದೇಶಕ ಸಿ ಎನ್ ಮಂಜುನಾಥ್ ಹೇಳಿದ್ದಾರೆ.

ಹಿಂದಿನ ಅಧ್ಯಯನವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸಕಾರಾತ್ಮಕ ಪ್ರತಿರಕ್ಷಣಾ-ಪ್ರತಿಕ್ರಿಯೆ ಫಲಿತಾಂಶಗಳು ಆರೋಗ್ಯ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಿದೆ ಮತ್ತು ಲಸಿಕೆ ತೆಗೆದುಕೊಳ್ಳಲು ಜನರನ್ನು ಪ್ರೇರೇಪಿಸಿದೆ ಎಂದು ತಿಳಿಸಿದ್ದಾರೆ.

ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹಠಾತ್ ಉಲ್ಬಣಗೊಂಡ ನಂತರ, ಕರ್ನಾಟಕವು ಬೂಸ್ಟರ್ ಡೋಸ್ ಲಸಿಕೆ ನೀಡುವಿಕೆಯನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಬೂಸ್ಟರ್ ಡೋಸ್ ಕವರೇಜ್ ಸುಮಾರು 20-25% ರಷ್ಟಿದೆ. “ಪಾಸಿಟಿವಿಟಿ ದರವು ಹೆಚ್ಚಾಗುತ್ತಿದ್ದಂತೆ, ಜನರು ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ ಎಂದು ಡಾ ಮಂಜುನಾಥ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here