Home Uncategorized ಟ್ರಕ್‌ನಲ್ಲಿ ಗೋ ತ್ಯಾಜ್ಯ ಸಾಗಾಟ- ನಟಿ ಐಂದ್ರಿತಾ ರೈಯಿಂದ ದೂರು: ಸ್ಪಷ್ಟನೆ ನೀಡಿದ ಆಗ್ನೇಯ ವಿಭಾಗದ...

ಟ್ರಕ್‌ನಲ್ಲಿ ಗೋ ತ್ಯಾಜ್ಯ ಸಾಗಾಟ- ನಟಿ ಐಂದ್ರಿತಾ ರೈಯಿಂದ ದೂರು: ಸ್ಪಷ್ಟನೆ ನೀಡಿದ ಆಗ್ನೇಯ ವಿಭಾಗದ ಪೊಲೀಸರು

3
0
Advertisement
bengaluru

ಲಾರಿಯಲ್ಲಿ ಗೋ ಮಾಂಸ, ಕೊಂಬು, ಮೂಳೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸರಿಗೆ ನಟಿ ಐಂದ್ರಿತಾ ರೈ ಟ್ವೀಟರ್‌ನಲ್ಲಿ ದೂರು ನೀಡಿದ್ದಾರೆ. ಬೆಂಗಳೂರು: ಲಾರಿಯಲ್ಲಿ ಗೋ ಮಾಂಸ, ಕೊಂಬು, ಮೂಳೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸರಿಗೆ ನಟಿ ಐಂದ್ರಿತಾ ರೈ ಟ್ವೀಟರ್‌ನಲ್ಲಿ ದೂರು ನೀಡಿದ್ದಾರೆ.

ಟ್ರಕ್‌ನಲ್ಲಿ ತುಂಬಿರುವ ಗೋ ತ್ಯಾಜ್ಯದ ವಿಡಿಯೋ ಸಮೇತ ಟ್ವೀಟ್ ಮಾಡಿದ ಐಂದ್ರಿತಾ ರೈ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು. ಇದೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಪೊಲೀಸ್ ಆಯುಕ್ತ ಮತ್ತು ಆಗ್ನೇಯ ವಿಭಾಗದ ಡಿಸಿಪಿಗೆ ಸಹ ಟ್ಯಾಗ್ ಮಾಡಿದ್ದರು.

ಇನ್ನೂ ಟ್ರಕ್‌ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಣೆ ಮಾಡಲಾಗುತ್ತಿದೆ ಎಂದು ನಟಿ ಮಾಡಿದ್ದ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಹಸು ಮಾಂಸ ತ್ಯಾಜ್ಯ ಅಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಗೋಮಾಂಸ ಸಾಗಣೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ಸೇರಿ ನಾಲ್ವರ ಬಂಧನ

bengaluru bengaluru

ಟ್ರಕ್‌ನಲ್ಲಿದ್ದ ಮಾಂಸದ ತ್ಯಾಜ್ಯ ಪರಿಶೀಲನೆ ನಡೆಸಲಾಗಿದೆ. ಟ್ರಕ್‌ನಲ್ಲಿದ್ದದ್ದು ಹಸು ಮಾಂಸದ ತ್ಯಾಜ್ಯವಲ್ಲ. ಟ್ರಕ್‌ನಲ್ಲಿದ್ದ ಮೂಳೆಗಳು, ಕೊಂಬು, ಚರ್ಮ ಹಸುವಿನದ್ದಲ್ಲ. ಪತ್ತೆಯಾದ ತ್ಯಾಜ್ಯ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ.
A truck was transporting a load of suspected cow waste(bone, horns, legs) last night. Now the vehicle is in @bomanahalli_ps Police are refusing to investigate by lodging an FIR. @CPBlr @BlrCityPolice @DCPSEBCP register FIR and investigate. Cow slaughter is illegal. @narendramodi pic.twitter.com/2u9L1v43Y0— Aindrita Ray (@AindritaR) September 6, 2023

ಟ್ರಕ್‌ನಲ್ಲಿ ಮಾಂಸದ ತ್ಯಾಜ್ಯ ಸಾಗಣೆ ಮಾಡಲಾಗುತ್ತಿತ್ತು. ಅದು ಹಸು ಮಾಂಸ ತ್ಯಾಜ್ಯ ಎಂದು ಆರೋಪ ಮಾಡಲಾಗಿತ್ತು. ಸಾಗಣೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಟಿ ಐಂದ್ರಿತಾ ರೈ ಟ್ವೀಟ್ ಮಾಡಿದ್ದರು. ತನಿಖೆ ನಡೆಸಿ ಎಫ್‌ಐಆರ್‌ ಹಾಕಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಪೊಲೀಸ್‌ ಕಮಿಷನರ್‌, ಬೆಂಗಳೂರು ಪೊಲೀಸ್‌ ಹಾಗೂ ಆಗ್ನೇಯ ಡಿಸಿಪಿಗೆ ಟ್ಯಾಗ್‌ ಮಾಡಿದ್ದರು.

ಇದನ್ನೂ ಓದಿ: ಗೋಮಾಂಸ ರಫ್ತಿನಲ್ಲಿ ಭಾರತವೇ ಮುಂದು; ದೇಶದಲ್ಲಿ ವರ್ಷಕ್ಕೆ 40 ಸಾವಿರ ಕೋಟಿ ರೂ. ವಹಿವಾಟು: ಅಗ್ನಿ ಶ್ರೀಧರ್

ಗೋ ತ್ಯಾಜ್ಯ ಸಾಗಾಣಿಕೆ ಆಗಿರಲಿಲ್ಲ. ಬಿಬಿಎಂಪಿ ಅನುಮತಿ ಪಡೆದು ಟ್ಯಾನರಿ ರಸ್ತೆಯ ರೆಹಮಾತುಲ್ಲಾ ಎಂಬಾತ ಎಮ್ಮೆ ಕೊಂಬು, ಮೂಳೆಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದರು ಎಂದು ಬೊಮ್ಮನಹಳ್ಳಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Enquiry into the incident @bommanalli PS it’s been confirmed that the commodities found in the vehicle included bones,horns,hides &animal byproducts were not from the cows& it was certified by BBMP Animal husbandry East slaughter house to the authorized trader.— C K Baba, IPS (@DCPSEBCP) September 7, 2023


bengaluru

LEAVE A REPLY

Please enter your comment!
Please enter your name here