Home Uncategorized ಟ್ರಾಫಿಕ್ ದಂಡ ಪಾವತಿಗೆ ರಿಯಾಯಿತಿ ನೀಡುವುದು ನಿಯಮ ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುತ್ತದೆ: ತಜ್ಞರು

ಟ್ರಾಫಿಕ್ ದಂಡ ಪಾವತಿಗೆ ರಿಯಾಯಿತಿ ನೀಡುವುದು ನಿಯಮ ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುತ್ತದೆ: ತಜ್ಞರು

31
0

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲಿನ ಶೇ 50 ರಿಯಾಯತಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದರೆ, ಸಂಚಾರ ತಜ್ಞರು ಮತ್ತು ಕಾರ್ಯಕರ್ತರು ಅದನ್ನು ವಿರೋಧಿಸಿದ್ದಾರೆ. ರಿಯಾಯಿತಿ ಯೋಜನೆಯು ದಂಡವನ್ನು ವಿಧಿಸಿದ ಏಕೈಕ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾರೆ.  ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲಿನ ಶೇ 50 ರಿಯಾಯತಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದರೆ, ಸಂಚಾರ ತಜ್ಞರು ಮತ್ತು ಕಾರ್ಯಕರ್ತರು ಅದನ್ನು ವಿರೋಧಿಸಿದ್ದಾರೆ. ರಿಯಾಯಿತಿ ಯೋಜನೆಯು ದಂಡವನ್ನು ವಿಧಿಸಿದ ಏಕೈಕ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಂಚಾರ ನಿಯಮ ಉಲ್ಲಂಘನೆಯು ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗುತ್ತದೆ ಮತ್ತು ಇದೇ ವೇಳೆ ರಿಯಾಯಿತಿಗಳು ಬಳಕೆದಾರರನ್ನು ಅಪಾಯಕ್ಕೆ ತಳ್ಳುವ ನಿಯಮ ಉಲ್ಲಂಘನೆಗಳನ್ನು ಉತ್ತೇಜಿಸುತ್ತದೆ ಎಂದು ವಾದಿಸಿದ್ದಾರೆ.

ಸಂಚಾರ ದಂಡವನ್ನು ವಿಧಿಸುವುದು ಜನರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮತ್ತು ತಮ್ಮ ಸ್ವಂತ ಮತ್ತು ಇತರರನ್ನು ಅಪಾಯಕ್ಕೆ ಒಳಪಡಿಸುವ ವಿರುದ್ಧ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರಕ್ಕೆ ಆದಾಯ ತರುವುದು ಮುಖ್ಯ ಉದ್ದೇಶವಲ್ಲ. ಅಂತಹ ರಿಯಾಯಿತಿಗಳನ್ನು ನೀಡುವ ಮೂಲಕ, ನೀವು ನಿಯಮ ಉಲ್ಲಂಘನೆ ತಡೆಗಟ್ಟುವಿಕೆಯನ್ನು ದುರ್ಬಲಗೊಳಿಸುತ್ತಿದ್ದೀರಿ ಮತ್ತು ಟ್ರಾಫಿಕ್ ಕಾನೂನು ಜಾರಿಯ ಮುಖ್ಯ ಉದ್ದೇಶವನ್ನು ಸೋಲಿಸುತ್ತಿದ್ದೀರಿ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯ ಮೊಬಿಲಿಟಿ ತಜ್ಞ ಆಶಿಶ್ ವರ್ಮಾ ಹೇಳಿದರು.

ಅಂತಹ ರಿಯಾಯಿತಿಗಳನ್ನು ಘೋಶಿಸುವ ಮೂಲಕ ‘ಎಲ್ಲರಿಗೂ ನ್ಯಾಯದ ಪ್ರವೇಶ’ವನ್ನು ಖಾತ್ರಿಪಡಿಸುವ ಬದಲು, ನಾವು ರಸ್ತೆ ಬಳಕೆದಾರರಿಗೆ ನ್ಯಾಯವನ್ನು ನಿರಾಕರಿಸುತ್ತೇವೆ ಮತ್ತು ಭವಿಷ್ಯದಲ್ಲಿ ಅವರನ್ನು ಹೆಚ್ಚು ಅಪಾಯ ಮತ್ತು ದುರ್ಬಲತೆಗೆ ಒಳಪಡಿಸುತ್ತೇವೆಯೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬೆಂಗಳೂರು: ಶೇ.50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ; ಮೊದಲ ದಿನವೇ 5.60 ಕೋ. ರೂ. ದಂಡ ವಸೂಲಿ!

‘ಟ್ರಾಫಿಕ್ ನಿಯಮ ಉಲ್ಲಂಘನೆಗಳು, ಇವುಗಳಲ್ಲಿ ಹೆಚ್ಚಿನವು ರಸ್ತೆ ಅಪಘಾತ ಸಂಬಂಧಿತ ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗುತ್ತವೆ. ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಮತ್ತು ದ್ವಿಚಕ್ರ ವಾಹನ ಬಳಕೆದಾರರು ಸಾಮಾನ್ಯವಾಗಿ ಕಡಿಮೆ ಆದಾಯದ ಕುಟುಂಬಗಳು ಮತ್ತು ಯುವ ಜನರಿಂದ ಕೂಡಿರುತ್ತಾರೆ. ರಿಯಾಯಿತಿಗಳನ್ನು ನೀಡುವ ಮೂಲಕ, ಸಂಚಾರ ಕಾನೂನುಗಳನ್ನು ಉಲ್ಲಂಘಿಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ. ನೀವು ಇನ್ಮುಂದೆ ಭಾರಿ ದಂಡವನ್ನು ಪಾವತಿಸಬೇಕಾಗಿಲ್ಲ. ಬದಲಿಗೆ ನಾವು ಕಾಲಕಾಲಕ್ಕೆ ರಿಯಾಯಿತಿಗಳನ್ನು ನೀಡುತ್ತೇವೆ ಎಂಬ ಸಂದೇಶವನ್ನು ನಾವು ಜನಸಾಮಾನ್ಯರಿಗೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಇದು ಜನಪರವಾದ ಕ್ರಮವಲ್ಲ. ಆದರೆ, ವಾಸ್ತವವಾಗಿ ಜನವಿರೋಧಿ ಕ್ರಮವಾಗಿದೆ ಎಂದು ಆಶಿಶ್ ವರ್ಮಾ ಹೇಳಿದ್ದಾರೆ. ರಿಯಾಯಿತಿ ನೀಡುವ ಬದಲು, ಸಾಧ್ಯವಾದರೆ ಸರ್ಕಾರ ದಂಡವನ್ನು ಹೆಚ್ಚಿಸಬೇಕು ಎಂದು ಬೆಂಗಳೂರಿನ ನಾಗರಿಕರ ಅಜೆಂಡಾ ಫಾರ್ ಬೆಂಗಳೂರು ಸಂಸ್ಥಾಪಕ ಸಂದೀಪ್ ಅನಿರುಧನ್ ಅಭಿಪ್ರಾಯಪಟ್ಟಿದ್ದಾರೆ. ‘ಬೆಂಗಳೂರಿನಲ್ಲಿ ಕಾನೂನುಬಾಹಿರ ಸ್ಥಿತಿಯನ್ನು ಗಮನಿಸಿದರೆ, ರಿಯಾಯಿತಿಯ ಮೂಲಕ ಪರಿಹಾರವನ್ನು ನೀಡುವ ಬದಲು ಹೆಚ್ಚಿನ ದಂಡವನ್ನು ವಿಧಿಸುವುದು ಅವಶ್ಯಕ. ಜನರು ತಪ್ಪು ದಿಕ್ಕಿನಲ್ಲಿ ನಿರ್ದಾಕ್ಷಿಣ್ಯವಾಗಿ ಚಾಲನೆ ಮಾಡುವುದು, ಸಿಗ್ನಲ್‌ಗಳು ಮತ್ತು ಪಾರ್ಕಿಂಗ್ ಚಿಹ್ನೆಗಳನ್ನು ಉಲ್ಲಂಘಿಸುವುದು, ಫುಟ್‌ಪಾತ್‌ಗಳಲ್ಲಿ ಪಾರ್ಕಿಂಗ್, ಶೇಡೆಡ್ ಕಿಟಕಿಗಳು, ಕಾರುಗಳ ಮೇಲೆ ಪೊಲೀಸ್ ಬೀಕನ್‌ಗಳನ್ನು ಸಹ ಅಳವಡಿಸುವುದನ್ನು ನಾವು ನೋಡಬಹುದು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಟ್ರಾಫಿಕ್ ಫೈನ್ 50% ರಿಯಾಯಿತಿ ಎಫೆಕ್ಟ್: ಹತ್ತೇ ದಿನದಲ್ಲಿ 120 ಕೋಟಿ ರೂ ಸಂಗ್ರಹ, 41 ಲಕ್ಷ ಪ್ರಕರಣಗಳು ಇತ್ಯರ್ಥ

‘ಕಾನೂನಿನ ಭಯವೇ ಇಲ್ಲದ ಸ್ಥಿತಿಗೆ ತಲುಪಿದೆ. ಸರ್ಕಾರವು ಕಾನೂನುಗಳನ್ನು ಅನುಸರಿಸದ ಮತ್ತು ಇತರ ಜನರ ಜೀವಕ್ಕೆ ಅಪಾಯವನ್ನುಂಟುಮಾಡುವವರಿಗೆ ರಿಯಾಯಿತಿ ಮೇಳಗಳನ್ನು ನೀಡುವ ಬದಲು ಉತ್ತಮ ಕಾನೂನು ಜಾರಿ ಮತ್ತು ಕಾನೂನಿನ ಭಯವನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು. 

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿ ಮೇಲಿನ ರಿಯಾಯಿತಿಯ ವಿಸ್ತರಣೆಗೆ ರಾಜ್ಯ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.

LEAVE A REPLY

Please enter your comment!
Please enter your name here