Home Uncategorized ಟ್ರಾಫಿಕ್ ಫೈನ್ 50% ರಿಯಾಯಿತಿ ಎಫೆಕ್ಟ್: ಹತ್ತೇ ದಿನದಲ್ಲಿ 120 ಕೋಟಿ ರೂ ಸಂಗ್ರಹ, 41...

ಟ್ರಾಫಿಕ್ ಫೈನ್ 50% ರಿಯಾಯಿತಿ ಎಫೆಕ್ಟ್: ಹತ್ತೇ ದಿನದಲ್ಲಿ 120 ಕೋಟಿ ರೂ ಸಂಗ್ರಹ, 41 ಲಕ್ಷ ಪ್ರಕರಣಗಳು ಇತ್ಯರ್ಥ

5
0
bengaluru

ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೆ ಶೇ.50ರಷ್ಚು ರಿಯಾಯಿತಿಯ ಅಂತಿಮ ದಿನವೂ ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ದಂಡ ಸಂಗ್ರಹಣೆ ಮಾಡಿದ್ದು, ಅಂತಿಮ ದಿನದ  ಹೊತ್ತಿಗೆ ಸಂಗ್ರಹಣೆ 120 ಕೋಟಿ ರೂ ದಾಟಿದೆ ಎನ್ನಲಾಗಿದೆ. ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೆ ಶೇ.50ರಷ್ಚು ರಿಯಾಯಿತಿಯ ಅಂತಿಮ ದಿನವೂ ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ದಂಡ ಸಂಗ್ರಹಣೆ ಮಾಡಿದ್ದು, ಅಂತಿಮ ದಿನದ  ಹೊತ್ತಿಗೆ ಸಂಗ್ರಹಣೆ 120 ಕೋಟಿ ರೂ ದಾಟಿದೆ ಎನ್ನಲಾಗಿದೆ.

ಹೌದು.. ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ (Bengaluru Traffic Fines)) 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್‌ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ದು, ಟ್ರಾಫಿಕ್‌ ಪೊಲೀಸರು(Bengaluru Traffic Police) ಕಂಡ್ರೆ, ಭಯಗೊಂಡು ಎಸ್ಕೇಪ್ ಆಗುತ್ತಿದ್ದ ಸವಾರರೆಲ್ಲಾ ಕಳೆದ 10 ದಿನದಿಂದ ಪೊಲೀಸರನ್ನೇ ಹುಡುಕಿಕೊಂಡು ಹೋಗಿ ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದಾರೆ. 

ಇದನ್ನೂ ಓದಿ: ಶೇ.50 ರಿಯಾಯಿತಿ: ಇಂದು ದಾಖಲೆಯ 17.61 ಕೋಟಿ ರೂ. ಕಲೆಕ್ಷನ್; ಒಟ್ಟು 85.83 ಕೋಟಿ ರೂ. ದಂಡ ವಸೂಲಿ!

ಪರಿಣಾಮ ಕೇವಲ 10 ದಿನಗಳ ಅವಧಿಯಲ್ಲಿ 120 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದ್ದು, ಬರೊಬ್ಬರಿ 41 ಲಕ್ಷ ಪ್ರಕರಣಗಳು ಇತ್ಯರ್ಥವಾದಂತಾಗಿವೆ. 

bengaluru

ಬಹಳ ದಿನಗಳಿಂದ ಹಲವು ಕೇಸ್​ನೊಂದಿಗೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದವರು 50 ಪರ್ಸೆಂಟ್ ಆಫರ್​ ಅನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಇನ್ನು ಪೊಲೀಸ್ ಇಲಾಖೆ ಸಹ ರಿಯಾಯಿತಿ ನೀಡಿ ಸರ್ಕಾರದ ಬೊಕ್ಕಸ ತುಂಬಿಸಿದೆ. 50 ಪರ್ಸೆಂಟ್ ಆಫರ್​ನಿಂದ 10 ದಿನಗಳಲ್ಲಿ ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ. ದಂಡದ ಹಣ ಹರಿದುಬಂದಿದೆ. ಫೆಬ್ರವರಿ 2 ರಂದು ಘೋಷಣೆ ಮಾಡ್ತಿದ್ದಂತೆ ದಂಡ ಪಾವತಿಸುವುದಕ್ಕೆ ಸವಾರರು ಮುಗಿ ಬಿದ್ದಿದ್ರು. ಅದರಲ್ಲೂ ಕಡೇ ದಿನವಾದ ಇವತ್ತು ಕ್ಯೂನಲ್ಲಿ ನಿಂತು ಸಾವಿರಾರು ಜನ ಫೈನ್‌ ಕಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ, 11 ಮೇಲ್ಸೇತುವೆ ನಿರ್ಮಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇನ್ನು ಆಫರ್‌ ಘೋಷಣೆ ಮಾಡಿದ ಮೊದಲ ದಿನವೇ ಕೋಟಿ ಕಲೆಕ್ಷನ್‌ ಆಗಿತ್ತು. ಕೊನೆ ದಿನವಾದ ಇವತ್ತು(ಫೆಬ್ರವರಿ 11) 9,45,887 ಪ್ರಕರಣಗಳ ಮೂಲಕ ಬರೋಬ್ಬರಿ 31 ಕೋಟಿ 26 ಲಕ್ಷದ 76 ಸಾವಿರದ 500 ರೂಪಾಯಿ ದಂಡದ ಹಣ ಖಾಕಿ ಖಜಾನೆ ಸೇರಿದೆ. ಆ ಮೂಲಕ ಹತ್ತೇ ದಿನದಲ್ಲಿ ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ. ದಂಡದ ರೂಪದಲ್ಲಿ ಹಣ ಹರಿದು ಬಂದಿದೆ. ಇಂದು ರಾತ್ರಿ 12 ಗಂಟೆವರೆಗೂ ಆನ್‌ಲೈನ್‌ನಲ್ಲಿ ಪಾವತಿಸಲು ಅನುಮತಿ ಇತ್ತು. ಹೀಗಾಗಿ ಒಟ್ಟು ಎಷ್ಟು ಸಂಗ್ರಹ ಆಯ್ತು ಎನ್ನುವುದು ನಾಳೆ(ಫೆಬ್ರವರಿ 12) ಪಕ್ಕಾ ಲೆಕ್ಕ ಸಿಗಲಿದೆ. 

41 ಲಕ್ಷ ಪ್ರಕರಣಗಳ ಇತ್ಯರ್ಥ
ಇನ್ನು ಟ್ರಾಫಿಕ್‌ ನಿಯಮ ಉಲ್ಲಂಘನೆಯಲ್ಲಿ ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಕೇಸ್‌ಗಳಿವೆ. ಈ ಆಫರ್‌ನಿಂದಾಗಿ ಒಟ್ಟು 41 ಲಕ್ಷ 20 ಸಾವಿರದ 626 ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗಿದೆ. ಒಟ್ಟಿನಲ್ಲಿ ಫೈನ್‌ ಕಟ್ಟಬೇಕಾಗುತ್ತೆ ಎಂದು ತಪ್ಪಿಸಿಕೊಂಡು ಓಡಾಡುತ್ತಿದ್ದ ವಾಹನ ಸವಾರರು, ಕಳೆದ 10 ದಿನಗಳಿಂದ ಮಾತ್ರ ಪೊಲೀಸರನ್ನ ಹುಡುಕಿಕೊಂಡು ಹೋಗಿ ದಂಡ ಪಾವತಿಸಿದ್ದಾರೆ. ಈ ಆಫರ್ ಅವಧಿ ಇವತ್ತಿಗೆ ಅಂತ್ಯವಾಗಿದೆ. ಆದ್ರೆ, ಇದಕ್ಕೆ ಬಂದ ಭರ್ಜರಿ ರೆಸ್ಪಾನ್ಸ್​ನಿಂದ ಇದನ್ನ ವಿಸ್ತಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. 

bengaluru

LEAVE A REPLY

Please enter your comment!
Please enter your name here