ಅರವಿಂದ ಪಾಟೀಲ ಗೆಲುವು
ಬೆಳಗಾವಿ:
ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
ತೀವ್ರ ಗಮನ ಸೆಳೆದಿದ್ದ ಖಾನಾಪುರ ಕ್ಷೇತ್ರದಿಂದ ಶಾಸಕಿ ಅಂಜಲಿ ನಿಂಬಾಳಕರ್ ಸೋಲು ಅನುಭವಿಸಿದ್ದಾರೆ. 2 ಮತಗಳ ಅಂತರದಿಂದ ಅರವಿಂದ ಪಾಟೀಲ ಗೆದ್ದಿದ್ದಾರೆ. ಅಂಜಲಿಗೆ 25 ಮತ, ಅರವಿಂದ ಪಾಟೀಲಗೆ 27 ಮತ ಬಿದ್ದಿದೆ.
ರಾಮದುರ್ಗದಲ್ಲಿ ಢವಣ್ ಮತ್ತು ನೇಕಾರರ ಕ್ಷೇತ್ರದಿಂದ ಕೃಷ್ಣ ಅನಿಗೋಳ್ಕರ್ ಗೆಲುವು ಸಾಧಿಸಿದ್ದಾರೆ. ಕೃಷ್ಣ ಅನಿಗೋಳ್ಕರ್ ಹೊರತುಪಡಿಸಿ ಉಳಿದೆಲ್ಲರೂ ಕತ್ತಿ, ಜಾರಕಿಹೊಳಿ ಬಣದವರು.
ಒಟ್ಟೂ 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. 3 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು.