Home Uncategorized ತಪ್ಪಾಗಿ ಯೂಟರ್ನ್: ಬೆಂಗಳೂರಿನಲ್ಲಿ ಶಾಲಾ ಬಸ್ ಚಾಲಕನಿಗೆ ಟ್ರಾಫಿಕ್ ಪೊಲೀಸ್ ದಂಡ…. ಫೋಟೋ ವೈರಲ್

ತಪ್ಪಾಗಿ ಯೂಟರ್ನ್: ಬೆಂಗಳೂರಿನಲ್ಲಿ ಶಾಲಾ ಬಸ್ ಚಾಲಕನಿಗೆ ಟ್ರಾಫಿಕ್ ಪೊಲೀಸ್ ದಂಡ…. ಫೋಟೋ ವೈರಲ್

12
0
Advertisement
bengaluru

ಶಾಲಾ ಬಸ್ ಚಾಲಕ ತಪ್ಪಾದ ರೀತಿಯಲ್ಲಿ ಅಪಾಯಕಾರಿ ಬಸ್ ಯೂಟರ್ನ್ ತೆಗೆದುಕೊಂಡ ಹಿನ್ನಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಬೆಂಗಳೂರು: ಶಾಲಾ ಬಸ್ ಚಾಲಕ ತಪ್ಪಾದ ರೀತಿಯಲ್ಲಿ ಅಪಾಯಕಾರಿ ಬಸ್ ಯೂಟರ್ನ್ ತೆಗೆದುಕೊಂಡ ಹಿನ್ನಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
 
ಬೆಂಗಳೂರಿನ ಗರುಡಾಚಾರ್ ಪಾಳ್ಯ ಮೆಟ್ರೊ ನಿಲ್ದಾಣದ ಬಳಿಯ ಜನನಿಬಿಡ ರಸ್ತೆಯಲ್ಲಿ ಶಾಲಾ ಬಸ್ ಚಾಲಕ ಯು-ಟರ್ನ್ ತೆಗೆದುಕೊಂಡಿದ್ದು, ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ “FixBangalorePls” ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

@blrcitytraffic @mahadevapuratrf @WFRising @ChrysalisHigh This is today, despite the complain, the same bus. what action is taken? pic.twitter.com/p2EKj8NoRo
— FixBangalorePlz (@G1_G) July 19, 2023

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಶೇ.36.8ರಷ್ಟು ಹೆಚ್ಚಳ

Chrysalis High ಶಾಲೆಗೆ ಸೇರಿದ ಬಸ್ ನ ಚಾಲಕ ಮಾಡಿದ ಅಚಾತುರ್ಯದ ವಿಡಿಯೋ ಅಪ್ಲೋಡ್ ಮಾಡಿ ಕ್ರಮ ಜರುಗಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರಿಗೆ ಮನವಿ ಮಾಡಲಾಗಿತ್ತು. ಬಳಿಕ ಅದೇ ರೀತಿಯಲ್ಲಿ ಬಸ್ ಮತ್ತೆ ಅಪಾಯಕಾರಿಯಾಗಿ ಯೂಟರ್ನ್ ಪಡೆಯುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ‘ಮತ್ತದೇ ತಪ್ಪು.. ಪೊಲೀಸರ ಕ್ರಮವೆಲ್ಲಿದೆ @blrcitytraffic ಎಂದು ಪ್ರಶ್ನಿಸಲಾಗಿದೆ.

bengaluru bengaluru

Fined Bus driver pic.twitter.com/ShCUgcjExC
— MAHADEVAPURA TRAFFIC BTP (@mahadevapuratrf) July 19, 2023

ಇದನ್ನೂ ಓದಿ: ಪ್ಯಾರಿಸ್-ಬೆಂಗಳೂರು ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನಿ: ಟೆಕ್ಕಿ ಬಂಧನ

ಇದಕ್ಕೆ ಉತ್ತರ ನೀಡಿರುವ ಮಹದೇವಪುರ ಸಂಚಾರಿ ಪೊಲೀಸರು ಬಸ್ ಚಾಲಕನಿಗೆ ದಂಡ ಹಾಕಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ. ಚಾಲಕನಿಗೆ ದಂಡದ ಚಲನ್ ನೀಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಪೊಲೀಸರ ತ್ವರಿತ ಪ್ರತಿಕ್ರಿಯೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  


bengaluru

LEAVE A REPLY

Please enter your comment!
Please enter your name here