ತನ್ನ ತಾಯಿ ಜೊತೆಗೆ ಆತ್ಮೀಯವಾಗಿ ಇದ್ದುದ್ದನ್ನೇ ತಪ್ಪಾಗಿ ಭಾವಿಸಿದ ಪುತ್ರನೊಬ್ಬ ಪಿಜಿಯೊಂದರ ಅಡುಗೆ ಮಾಡುವ ವ್ಯಕ್ತಿಗೆ ಚಾರಿಯಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು: ತನ್ನ ತಾಯಿ ಜೊತೆಗೆ ಆತ್ಮೀಯವಾಗಿ ಇದ್ದುದ್ದನ್ನೇ ತಪ್ಪಾಗಿ ಭಾವಿಸಿದ ಪುತ್ರನೊಬ್ಬ ಪಿಜಿಯೊಂದರ ಅಡುಗೆ ಮಾಡುವ ವ್ಯಕ್ತಿಗೆ ಚಾರಿಯಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ರವಿ ಭಂಡಾರಿ (44) ಎಂದು ಗುರ್ತಿಸಲಾಗಿದೆ. ಇವರು ರಾಜಾಜಿನಗರ ಪಿಜಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಇದೇ ಪಿಜಿಯಲ್ಲಿ ರಾಹುಲ್‌ನ ತಾಯಿ ಪದ್ಮಾವತಿ ಅಡುಗೆ ಸಹಾಯಕಿಯಾಗಿದ್ದರು. ಪದ್ಮಾವತಿ ಅವರ ಮನೆಯಲ್ಲಿಯೇ ರವಿ ಭಂಡಾರಿಯವರ ಹತ್ಯೆಯಾಗಿದೆ.
ಇಬ್ಬರೂ ಆತ್ಮೀಯವಾಗಿದ್ದುದ್ದನ್ನೇ ತಪ್ಪಾಗಿ ಭಾವಿಸಿದ್ದ ಪದ್ಮಾವತಿಯ ಮಗ ರಾಹುಲ್, ನಿಮ್ಮ ಜೊತೆ ಮಾತನಾಡಬೇಕೆಂದು ರವಿ ಭಂಡಾರಿಯವರನ್ನು ಮನೆಗೆ ಕರೆಸಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆ ವೇಳೆ ಪದ್ಮಾವತಿಯವರು ಪಿಜಿಯಲ್ಲಿದ್ದರು. ಕೆಲಸ ಮುಗಿಸಿ ಮನೆಗೆ ತೆರಳಿದಾಗ ರವಿಯವರ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.