Home Uncategorized ತುಮಕೂರು: ಅದೃಷ್ಟ ಬರುತ್ತದೆ ಎಂದು ನರಿ ಸಾಕಿದ್ದ ವ್ಯಕ್ತಿ ಅರೆಸ್ಟ್

ತುಮಕೂರು: ಅದೃಷ್ಟ ಬರುತ್ತದೆ ಎಂದು ನರಿ ಸಾಕಿದ್ದ ವ್ಯಕ್ತಿ ಅರೆಸ್ಟ್

16
0
Advertisement
bengaluru

ಅದೃಷ್ಟ ಬರುತ್ತದೆ ಎಂದು ಕೋಳಿ ಫಾರಂನಲ್ಲಿ ನರಿ ಸಾಕಿದ್ದ ವ್ಯಕ್ತಿಯೋರ್ವನನ್ನು ತುಮಕೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತುಮಕೂರು: ಅದೃಷ್ಟ ಬರುತ್ತದೆ ಎಂದು ಕೋಳಿ ಫಾರಂನಲ್ಲಿ ನರಿ ಸಾಕಿದ್ದ ವ್ಯಕ್ತಿಯೋರ್ವನನ್ನು ತುಮಕೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟ ಒಲಿಯುತ್ತದೆ ಎಂದು ಕೆಲವರು ಜೋಡಿ ನರಿಗಳಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಿದ್ದನ್ನು ನೋಡಿದ್ದೇವೆ. ಆದರೆ, ಇನ್ನೊಬ್ಬ ಮೂಢನಂಬಿಕೆಗೆ ಜೋತುಬಿದ್ದು ಜೀವಂತ ನರಿಯನ್ನು ಕೋಳಿಫಾರಂನಲ್ಲಿ ಸಾಕಿ ಬಂಧನಕ್ಕೊಳಗಾಗಿದ್ದಾನೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿಕಾಂತ್ ಎಂಬುವವರು ತನ್ನ ಕೋಳಿಫಾರಂನಲ್ಲಿ ನರಿ ಸಾಕಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಐಡಿ ಸಂಚಾರ ಅರಣ್ಯ ಘಟಕದ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಹಾಡಹಗಲೇ ಬೀದರ್ ನಡುರಸ್ತೆಯಲ್ಲೇ ಕೊಲೆ!

ಕಳೆದ ಏಳು ತಿಂಗಳಿನಿಂದ ಗ್ರಾಮದ ಕೆರೆ ಸಮೀಪ ಲಕ್ಷ್ಮಿಕಾಂತ್‍ಗೆ ನರಿಮರಿಗಳು ಸಿಕ್ಕಿವೆ. ಇವುಗಳಲ್ಲಿ ಒಂದು ಮರಿಯನ್ನು ತಂದು ತನ್ನ ಕೋಳಿಫಾರಂನಲ್ಲಿ ಬೋನ್‍ನಲ್ಲಿಟ್ಟು ಸಾಕುತ್ತಿದ್ದ. ಅಲ್ಲದೆ, ಪ್ರತಿನಿತ್ಯ ಮುಂಜಾನೆ ನರಿಮುಖ ನೋಡಿ ಅಂದಿನ ಕೆಲಸ- ಕಾರ್ಯಗಳನ್ನು ಮಾಡುತ್ತಿದ್ದ. ಆದರೆ, ಅದೃಷ್ಟ ಎಂದು ಯಾವ ನರಿಯ ಮುಖ ನೋಡುತ್ತಿದ್ದನೋ ಆ ನರಿಯೇ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವನ್ಯಮೃಗವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಆರೋಪದ ಮೇರೆಗೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

bengaluru bengaluru

ಇದನ್ನೂ ಓದಿ: ಬೀದರ್‌: 7 ಅಂತಸ್ತಿನ ಕಟ್ಟಡದಿಂದ ಜಿಗಿದು 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾವು

ಅಧಿಕಾರಿಗಳ ಬಳಿ ಆರೋಪಿ ಲಕ್ಷ್ಮೀಕಾಂತ್, ಮೂಢನಂಬಿಕೆಯಿಂದ ಈ ರೀತಿ ಮಾಡಿದೆನೇ ವಿನಃ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿದ್ದಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸ್ಥಳೀಯ ವಲಯ ಅರಣ್ಯಾಧಿಕಾರಿಗಳು, ತುಮಕೂರು ವಲಯ, ತುಮಕೂರು ಜಿಲ್ಲಾಯವರಿಗೆ ವನ್ಯಜೀವಿಯಾದ ನರಿಯ ಸುರಕ್ಷತೆ ಮತ್ತು ಸಂರಕ್ಷಣೆಯ ಸಲುವಾಗಿ ನ್ಯಾಯಾಲಯದ ಅನುಮತಿ ಪಡೆದು ನರಿಯನ್ನು ಕಾಡಿಗೆ ಬಿಡಲು ಅವರ ಸುಪರ್ದಿಗೆ ನೀಡಲಾಗಿರುತ್ತದೆ.
 


bengaluru

LEAVE A REPLY

Please enter your comment!
Please enter your name here