Home Uncategorized ತುಮಕೂರು: ಸೂತಕದ ಸಂಪ್ರದಾಯ ಆಚರಣೆ; ಬಾಣಂತಿ, ಶಿಶುವನ್ನು ಊರಿಂದ ಹೊರಗಿಟ್ಟ ಕಾಡುಗೊಲ್ಲ ಕುಟುಂಬ!

ತುಮಕೂರು: ಸೂತಕದ ಸಂಪ್ರದಾಯ ಆಚರಣೆ; ಬಾಣಂತಿ, ಶಿಶುವನ್ನು ಊರಿಂದ ಹೊರಗಿಟ್ಟ ಕಾಡುಗೊಲ್ಲ ಕುಟುಂಬ!

10
0
Advertisement
bengaluru

ತಾಯಿ ಮತ್ತು ಆಕೆಯ ನವಜಾತ ಶಿಶುವನ್ನು ಒಂದೆರಡು ತಿಂಗಳು ಮನೆಯಿಂದ ದೂರವಿಡುವ ಅನಾದಿ ಕಾಲದ ಸಂಪ್ರದಾಯ ಕಾಡುಗೊಲ್ಲ ಸಮುದಾಯದಲ್ಲಿ ಇಂದಿಗೂ ಜೀವಂತವಾಗಿದೆ. ತುಮಕೂರು: ತಾಯಿ ಮತ್ತು ಆಕೆಯ ನವಜಾತ ಶಿಶುವನ್ನು ಒಂದೆರಡು ತಿಂಗಳು ಮನೆಯಿಂದ ದೂರವಿಡುವ ಅನಾದಿ ಕಾಲದ ಸಂಪ್ರದಾಯ ಕಾಡುಗೊಲ್ಲ ಸಮುದಾಯದಲ್ಲಿ ಇಂದಿಗೂ ಜೀವಂತವಾಗಿದೆ. ತುಮಕೂರು ಜಿಲ್ಲೆಯ ಕಾಡುಗೊಲ್ಲರ ಮಲ್ಲೇನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿದೆ.

ತುಮಕೂರಿನ ಊರ ಹೊರಗಿನ ಗುಡಿಸಲಿನಲ್ಲಿ ಬಾಣಂತಿ ಮತ್ತು ಆಗ ತಾನೆ ನವಜಾತ ಶಿಶುವನ್ನು ಇಟ್ಟಿದ್ದಾರೆ.  28 ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ಕೆಲವು ತೊಂದರೆಗಳಿಂದಾಗಿ ವಸಂತ ಅವರು ತಮ್ಮ ಅವಳಿ ಶಿಶುಗಳಲ್ಲಿ ಒಬ್ಬ ಗಂಡು ಮಗುವನ್ನು ಕಳೆದುಕೊಂಡಿದ್ದರು. 20 ದಿನಗಳ ಕಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾಳೆ.

ಆಸ್ಪತ್ರೆಯಿಂದ ವಸಂತ ಡಿಸ್ಚಾರ್ಜ್ ಆದ ನಂತರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿರಲಿಲ್ಲ. ಆಕೆಯ ಪತಿ ಸಿದ್ದೇಶ್ ಮತ್ತು ಅವರ ಕುಟುಂಬದ ಇತರ ಹಿರಿಯರು ಆಕೆಯನ್ನು ತನ್ನ ಮಗುವಿನೊಂದಿಗೆ ತಾತ್ಕಾಲಿಕ ಟೆಂಟ್‌ನಲ್ಲಿ ವಾಸಿಸುವಂತೆ ಒತ್ತಾಯಿಸಿದ್ದಾರೆ. ಹಳೆಯ ಸಂಪ್ರದಾಯದಂತೆ, ತಾಯಿ ಮತ್ತು ಅವರ ನವಜಾತ ಶಿಶು ಎರಡು ತಿಂಗಳ ಕಾಲ ಮನೆಯಿಂದ ದೂರವಿರುವ ತಾತ್ಕಾಲಿಕ ಟೆಂಟ್ ನಲ್ಲಿ ವಾಸಿಸಬೇಕು.

ಇದನ್ನೂ ಓದಿ: ಕೋಲಾರ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು; ಸಂಬಂಧಿಕರಿಂದ ಚಿಕಿತ್ಸೆ ವಿಳಂಬ ಆರೋಪ!

bengaluru bengaluru

ಸಿದ್ದೇಶ್ ಎಂಬ ರೈತ ತನ್ನ ಮನೆಯ ಸಮೀಪದ ಹೊಲದಲ್ಲಿ ತಾತ್ಕಾಲಿಕ ಟೆಂಟ್ ಹಾಕಿದ್ದಾನೆ. ವಸಂತಾ ಅವರ ತಾಯಿ ನಿಯಮಿತವಾಗಿ ಅವಳನ್ನು ಭೇಟಿ ಮಾಡುತ್ತಾರೆ. ಅವಳು ತನ್ನ ಮಗಳು ಮತ್ತು ಮೊಮ್ಮಗಳಿಗೆ ಸ್ನಾನ ಮಾಡಿಸುತ್ತಾಳೆ. ಮಗಳಿಗೆ ಆಹಾರವನ್ನು ನೀಡುವುದರ ಜೊತೆಗೆ, ಮಗುವನ್ನು ನೋಡಿಕೊಳ್ಳಲು  ಆಕೆ ಸಹಾಯ ಮಾಡುತ್ತಾಳೆ.

ಈ ಸಾಂಪ್ರದಾಯಿಕ ಅಭ್ಯಾಸವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಾರೆ. ಸಮುದಾಯದ ಸದಸ್ಯರು ತಮ್ಮ ಪ್ರಸವಾನಂತರದ ಮತ್ತು ಋತುಚಕ್ರದ ಸಮಯದಲ್ಲಿ ಮಹಿಳೆಯರನ್ನು “ಅಶುದ್ಧ” ಎಂದು ಪರಿಗಣಿಸಲಾಗುತ್ತದೆ.  ಈ ಸಮಯದಲ್ಲಿ ಅವರು ಒಟ್ಟಿಗೆ ವಾಸಿಸುತ್ತಿದ್ದರೆ ಅಥವಾ ದೇವಾಲಯಗಳಿಗೆ ಭೇಟಿ ನೀಡಿದರೆ ಅವರ ದೇವತೆಯ ಪವಿತ್ರತೆ ಹಾಳಾಗುತ್ತದೆ ಎಂದು ನಂಬುತ್ತಾರೆ.

ಇದನ್ನೂ ಓದಿ: ಆಕಸ್ಮಿಕವಾಗಿ ಮಗುವನ್ನು ಕಾರಿನಲ್ಲೆ ಬಿಟ್ಟ ಪೋಷಕರು; 18 ತಿಂಗಳ ಶಿಶು ಸಾವು!

ನಮ್ಮ ದೇವರಿಗೆ ಸೂತಕ ಆಗಲ್ಲ, ಹಾಗಾಗಿ ನಾವು ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುತ್ತಾರೆ ಗೊಲ್ಲ ಸಮುದಾಯದವರು. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು. ದೇವರಿಗೆ ಆಗಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ಈ ಮೂಢ ನಂಬಿಕೆಗಳ ನಡುವೆ ಬಾಣಂತಿಯ ಸಂಕಷ್ಟ ಯಾರಿಗೂ ಕೇಳದಾಗಿದೆ.

ಬೆಳ್ಳಾವಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಎಂ.ಸಿ.ರಾಧಾಕೃಷ್ಣ ಹಾಗೂ ಸಿಬ್ಬಂದಿ ಮಲ್ಲೇನಹಳ್ಳಿಯಲ್ಲಿರುವ ಟೆಂಟ್‌ಗೆ ಭೇಟಿ ನೀಡಿ ವಸಂತ ಹಾಗೂ ಅವರ ಮಗಳ ಆರೋಗ್ಯ ತಪಾಸಣೆ ನಡೆಸಿದರು.

ಗರ್ಭಧಾರಣೆಯ ಎಂಟು ತಿಂಗಳ ನಂತರ ಮಗು ಅಕಾಲಿಕವಾಗಿ ಜನಿಸಿತು ಮತ್ತು ಕಡಿಮೆ ತೂಕವನ್ನು ಹೊಂದಿತ್ತು. ಮಗುವನ್ನು NICU ನಲ್ಲಿ ಇಡಬೇಕಿತ್ತು. ನಾವು ಪ್ರಯತ್ನಿಸಿದೆವು, ಆದರೆ ಅವರ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ, ಎಂದು ಅವರುದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ಗೆ  ತಿಳಿಸಿದರು.

ಇದನ್ನೂ ಓದಿ: ಕೊಪ್ಪಳ: ಸತತ ಮಳೆಗೆ ಮನೆ ಕುಸಿದು ವೃದ್ಧೆ, ನವಜಾತ ಶಿಶು ಸಾವು

ಹಿರಿಯ ಮುಖಂಡ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಕಾಡುಗೊಲ್ಲರಲ್ಲಿ ಶಿಕ್ಷಣ ಮತ್ತು ಅರಿವಿನ ಕೊರತೆಯಿಂದಾಗಿ ಅನಾದಿ ಕಾಲದ ಪದ್ಧತಿ ಇಂದಿಗೂ ಉಳಿದುಕೊಂಡಿದೆ ಎಂದಿದ್ದಾರೆ.

ರಾಜ್ಯಾದ್ಯಂತ ಸುಮಾರು 1,300 ಕಾಡುಗೊಲ್ಲ ಕುಗ್ರಾಮಗಳಲ್ಲಿ ಈ ಪದ್ಧತಿ ಇದೆ. ತಾಯಿ ಮತ್ತು ಮಗುವಿನ ಆರೋಗ್ಯ ಅಪಾಯದಲ್ಲಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಕ್ರಮಕ್ಕಾಗಿ ಒತ್ತಾಯಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಿ.ಎನ್.ಮಂಜುನಾಥ್ ಹೇಳಿದರು.


bengaluru

LEAVE A REPLY

Please enter your comment!
Please enter your name here