Home Uncategorized ದಕ್ಷಿಣ ಕನ್ನಡ: ಅಜ್ಜಾವರ ಗ್ರಾಮದ ಶಾಲೆಯ 100 ಚದರ ಅಡಿಯ ಊಟದ ಕೊಠಡಿಯಲ್ಲಿ ಪಾಠ ಕೇಳುತ್ತಿರುವ...

ದಕ್ಷಿಣ ಕನ್ನಡ: ಅಜ್ಜಾವರ ಗ್ರಾಮದ ಶಾಲೆಯ 100 ಚದರ ಅಡಿಯ ಊಟದ ಕೊಠಡಿಯಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು!

2
0
Advertisement
bengaluru

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ 43 ವರ್ಷ ಹಳೆಯದಾದ ಸರಕಾರಿ ಪ್ರಾಥಮಿಕ ಶಾಲೆಗೆ 1ರಿಂದ 5ನೇ ತರಗತಿಯ ಮಕ್ಕಳು ಮಧ್ಯಾಹ್ನದ ಊಟಕ್ಕೆಂದೇ ಇರುವ ಪುಟ್ಟ ಕೊಠಡಿಯಲ್ಲಿ ತರಗತಿಗೆ ಹಾಜರಾಗುವ ಅನಿವಾರ್ಯತೆ ಎದುರಾಗಿದೆ. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ 43 ವರ್ಷ ಹಳೆಯದಾದ ಸರಕಾರಿ ಪ್ರಾಥಮಿಕ ಶಾಲೆಗೆ 1ರಿಂದ 5ನೇ ತರಗತಿಯ ಮಕ್ಕಳು ಮಧ್ಯಾಹ್ನದ ಊಟಕ್ಕೆಂದೇ ಇರುವ ಪುಟ್ಟ ಕೊಠಡಿಯಲ್ಲಿ ತರಗತಿಗೆ ಹಾಜರಾಗುವ ಅನಿವಾರ್ಯತೆ ಎದುರಾಗಿದೆ.

ಆರಂಭದಲ್ಲಿ ದೊಡ್ಡೇರಿಯಲ್ಲಿನ ಶಾಲಾ ಕಟ್ಟಡದ ಮೇಲ್ಛಾವಣಿಯನ್ನು ದುರಸ್ತಿ ಮಾಡಬೇಕಾಗಿತ್ತು, ಹೀಗಾಗಿ ಅದನ್ನು ಹೇಗೋ ಸರಿಪಡಿಸಿದರು. ಕಳೆದ ವರ್ಷ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮರದ ದಿಮ್ಮಿಗಳನ್ನು ಆಧಾರವಾಗಿಟ್ಟುಕೊಂಡು ತಾತ್ಕಾಲಿಕವಾಗಿ ಗೋಡೆಗಳು ಕುಸಿಯುವುದನ್ನು ನಿಲ್ಲಿಸಿದ್ದವು ಎಂದು ಶಾಲಾಭಿವೃದ್ಧಿ ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸದಸ್ಯರು  ವಿವರ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ಹತ್ತಿರದ ಶಾಲೆಗಳಿಗೆ ಸ್ಥಳಾಂತರಿಸುವಂತೆ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗೆ ಮನವಿ ಮಾಡಿತು ಆದರೆ ಎಸ್‌ಡಿಎಂಸಿ ಕೇಳಲಿಲ್ಲ, ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ಭಯದಿಂದ, ವಿದ್ಯಾರ್ಥಿಗಳನ್ನು 100 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಅಕ್ಷರ ದಾಸೋಹಕ್ಕಾಗಿ ನಿರ್ಮಿಸಿದ ಕೊಠಡಿಗೆ ಸ್ಥಳಾಂತರಿಸಲಾಯಿತು, ಅಲ್ಲಿ 12 ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತಿವೆ ಮತ್ತು ಇನ್ನೊಂದು ಪಾಳುಬಿದ್ದ ಕಟ್ಟಡದಲ್ಲಿ ಮಧ್ಯಾಹ್ನದ ಊಟವನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ 1,695 ಅನಧಿಕೃತ ಶಾಲೆಗಳನ್ನು ಬಂದ್ ಮಾಡಲಾಗುವುದು: ಶಿಕ್ಷಣ ಸಚಿವ ಮಧು ಬಂಗಾರಪ್ಪ

bengaluru bengaluru

ಶಾಲೆಗೆ ಅನುದಾನ ನೀಡುವಂತೆ ಹಿಂದಿನ ಬಿಜೆಪಿ ಸರ್ಕಾರಕ್ಕೆ ಹಾಗೂ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಭರವಸೆಗಳು ಇನ್ನೂ ಈಡೇರಿಲ್ಲ.

ರಾಜ್ಯ ವಿಧಾನಸಭಾ ಚುನಾವಣೆಗೆ ವಾರದ ಹಿಂದೆ ಸುಳ್ಯದ ಅಂದಿನ ಶಾಸಕ ಎಸ್.ಅಂಗಾರ ಅವರು ಶಾಲೆಯ ದುರಸ್ತಿಗೆ 7 ಲಕ್ಷ ರೂ ನೀಡಿದರು. ಆದರೆ, ಚುನಾವಣೆ ಕಾರಣ ಕಾಮಗಾರಿ ವಿಳಂಬವಾಗಿದ್ದು, ದುರಸ್ತಿ ಕಾರ್ಯ ಪೂರ್ಣಗೊಳ್ಳದ ಕಾರಣ ಹಣ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಎಸ್‌ಡಿಎಂಸಿ ಸದಸ್ಯರೊಬ್ಬರು ತಿಳಿಸಿದರು.

ಮಕ್ಕಳು ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಡಿ ಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಇದನ್ನೂ ಓದಿ: ಮುಂಬರುವ ವರ್ಷದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 2, 000 ಶಾಲಾ ಕೊಠಡಿಗಳ ನಿರ್ಮಾಣ- ಸಿಎಂ ಬೊಮ್ಮಾಯಿ

ಮಕ್ಕಳು ಸಮೀಪದ ಎಸ್‌ಸಿ/ಎಸ್‌ಟಿ ಕಾಲೋನಿಯವರಾಗಿದ್ದು, ಅಧಿಕಾರಿಗಳು ಈ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕು ಮತ್ತು ಮಕ್ಕಳು ಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.

ಇಬ್ಬರು ಕಾಯಂ ಶಿಕ್ಷಕರಿದ್ದು, ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಒಬ್ಬರೇ ಶಿಕ್ಷಕರಿಗೆ ಹೊರೆಯಾಗುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

 


bengaluru

LEAVE A REPLY

Please enter your comment!
Please enter your name here