Home ಕರ್ನಾಟಕ ದಕ್ಷಿಣ ಕನ್ನಡ: ವಿವಿಧ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಸಂಯೋಜಕರ ನೇಮಕ

ದಕ್ಷಿಣ ಕನ್ನಡ: ವಿವಿಧ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಸಂಯೋಜಕರ ನೇಮಕ

18
0

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಮುಖಂಡರನ್ನು ಸಂಯೋಜಕರನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ನೇಮಕ ಮಾಡಿದ್ದಾರೆ.

ಸಂಯೋಜಕರ ವಿವರ ಇಂತಿವೆ. ಬಂಟ್ವಾಳ ಕ್ಷೇತ್ರ-ಮಾಜಿ ಮೇಯರ್ ಶಶಿಧರ್ ಹೆಗ್ಡೆ, 201 ಮೂಡಬಿದಿರೆ ಕ್ಷೇತ್ರ -ಮಾಜಿ ಮೇಯರ್ ಮಹಾಬಲ ಮಾರ್ಲ ಮತ್ತು ಕಾರ್ಪೊರೇಟರ್ ಅನಿಲ್ ಕುಮಾರ್, ಸುಳ್ಯ ಕ್ಷೇತ್ರ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ , ಮಂಗಳೂರು ಉತ್ತರ ಕ್ಷೇತ್ರ – ಕಾರ್ಪೊರೇಟರ್ ಅಬ್ದುಲ್ ರವೂಫ್, ಮಂಗಳೂರು ದಕ್ಷಿಣ ಕ್ಷೇತ್ರ- ಸಂತೋಷ್ ಕುಮಾರ್ ಶೆಟ್ಟಿ ಮತ್ತು ಲಾರೆನ್ಸ್ ಡಿ’ ಸೋಜ, ಬೆಳ್ತಂಗಡಿ ಕ್ಷೇತ್ರ -ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಮಂಗಳೂರು ಕ್ಷೇತ್ರ – ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿಹಾಗೂ ಕಾರ್ಪೊರೇಟರ್ ಅಶ್ರಫ್ ಬಜಾಲ್, ಪುತ್ತೂರು- ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು, ಅಲ್ತಾಫ್ ಮೊಹಮ್ಮದ್ ಅವರು ನೇಮಕಗೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here