Home Uncategorized ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ; ಕಾಫಿ ಬೆಳೆ ಕೊಯ್ಲು ಮಾಡಲು ಎದುರಾದ ಸಂಕಷ್ಟ

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ; ಕಾಫಿ ಬೆಳೆ ಕೊಯ್ಲು ಮಾಡಲು ಎದುರಾದ ಸಂಕಷ್ಟ

25
0

ದಕ್ಷಿಣ ಕೊಡಗಿನ ಗ್ರಾಮ ವ್ಯಾಪ್ತಿಯಲ್ಲಿ ಹುಲಿಗಳು ಬೀಡುಬಿಟ್ಟಿರುವುದರಿಂದ ಕಾಫಿ ಬೆಳೆಗಾರರು ಕೊಯ್ಲು ಮಾಡುವಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಈ ವಲಯವು ಈಗಾಗಲೇ ಕಾಫಿ ಬೆಳೆ ಕೊಯ್ಲು ಋತುವಿನಲ್ಲಿ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದು, ಹುಲಿಗಳ ಕಾಟದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಡಿಕೇರಿ: ದಕ್ಷಿಣ ಕೊಡಗಿನ ಗ್ರಾಮ ವ್ಯಾಪ್ತಿಯಲ್ಲಿ ಹುಲಿಗಳು ಬೀಡುಬಿಟ್ಟಿರುವುದರಿಂದ ಕಾಫಿ ಬೆಳೆಗಾರರು ಕೊಯ್ಲು ಮಾಡುವಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಈ ವಲಯವು ಈಗಾಗಲೇ ಕಾಫಿ ಬೆಳೆ ಕೊಯ್ಲು ಋತುವಿನಲ್ಲಿ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದು, ಹುಲಿಗಳ ಕಾಟದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುವ ಈ ಪ್ರದೇಶದಲ್ಲಿ ಕೆಲಸ ಮಾಡಲು ಕಾರ್ಮಿಕರು ನಿರಾಕರಿಸುತ್ತಿದ್ದಾರೆ. 

ದಕ್ಷಿಣ ಕೊಡಗಿನ ನಿವಾಸಿಗಳನ್ನು ಹುಲಿಗಳ ಭಯ ಕಾಡುತ್ತಿದ್ದು, ಎಸ್ಟೇಟ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ‘ನಾವು ಈಗಾಗಲೇ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದೇವೆ ಮತ್ತು ಎಸ್ಟೇಟ್‌ಗಳು ಹಾಗೂ ಅರಣ್ಯದ ಅಂಚಿನಲ್ಲಿ ಹುಲಿಗಳು ನಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತಿವೆ. ಅಲ್ಲದೆ, ಕೂಲಿ ಕಾರ್ಮಿಕರ ಪ್ರಾಣಕ್ಕೆ ಕುತ್ತು ತರುವಂತಿಲ್ಲ ಮತ್ತು ಕಾಫಿ ಕೊಯ್ಯುವ ಕೆಲಸದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ದಕ್ಷಿಣ ಕೊಡಗಿನ ಬೆಳೆಗಾರ ಹರೀಶ್ ಹೇಳುತ್ತಾರೆ. 

ಕಳೆದ ವರ್ಷ ಕಾಳುಮೆಣಸು ಕೀಳುವ ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿದ್ದನ್ನು ಸ್ಮರಿಸಿದ ಅವರು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕೂಲಿಕಾರರೊಂದಿಗೆ ಬಂದೂಕು ಹಿಡಿದುಕೊಂಡು ಹೋಗಬೇಕಾಗುತ್ತದೆ. ಎಸ್ಟೇಟ್‌ಗಳಲ್ಲಿ ಅಡ್ಡಾಡುವಾಗಲೂ ನಾವು ಆತ್ಮರಕ್ಷಣೆಗಾಗಿ ಆಯುಧಗಳನ್ನು ತೆಗೆದುಕೊಂಡು ಹೋಗುತ್ತೇವೆ. ದಕ್ಷಿಣ ಕೊಡಗಿನ ಎರಡನೇ ರುದ್ರಗುಪ್ಪೆ ಗ್ರಾಮದಲ್ಲಿ ಹುಲಿ ದಾಳಿಗೆ ಮೂರು ಕರುಗಳು ಬಲಿಯಾಗಿವೆ ಎಂದು ತಿಳಿಸಿದರು.

ಕರುಗಳ ಮಾಲೀಕ ಎ ಧನು ಅವರ ನಿವಾಸದ ಸಮೀಪವೇ ಈ ಘಟನೆ ನಡೆದಿದೆ. ಕಳೆದ ವಾರ, ರುದ್ರಗುಪ್ಪೆ ಗ್ರಾಮದಿಂದ ಸುಮಾರು 36 ಕಿಮೀ ದೂರದಲ್ಲಿರುವ ಮಾಲ್ದಾರೆ ಗ್ರಾಮದಲ್ಲಿ ಗಾಯಗೊಂಡ ಗಂಡು ಹುಲಿಯನ್ನು ಹತ್ತಿರದ ಮಾನವ ವಾಸಸ್ಥಳದಿಂದ ರಕ್ಷಿಸಲಾಯಿತು.

ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಹುಲಿಗಳ ಓಡಾಟ ಹೆಚ್ಚುತ್ತಿದ್ದು, ಹುಲಿಗಳನ್ನು ಸೆರೆಹಿಡಿದು ರಕ್ಷಿಸಿದರೂ ತೊಂದರೆಗೆ ಪರಿಹಾರ ಸಿಕ್ಕಿಲ್ಲ. ಒಂದು ಹುಲಿಯನ್ನು ಹಿಡಿದರೆ, ಮಾನವ-ಕಾಡುಪ್ರಾಣಿ ಸಂಘರ್ಷದ ಪ್ರದೇಶವನ್ನು ಮತ್ತೊಂದು ಹುಲಿ ಆಕ್ರಮಿಸಿಕೊಳ್ಳುತ್ತದೆ. ಏಕೆಂದರೆ, ಇದು ರೈತರ ಮಾಲೀಕತ್ವದ ಜಾನುವಾರುಗಳಲ್ಲಿ ಸುಲಭವಾಗಿ ಬೇಟೆಯನ್ನು ಕಂಡುಕೊಳ್ಳುತ್ತದೆ. ಪೊನ್ನಂಪೇಟೆ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ರುದ್ರಗುಪ್ಪೆ ಗ್ರಾಮದ ಸಂಘರ್ಷ ವಲಯದಾದ್ಯಂತ ಐದು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಇರಿಸಿದ್ದು, ಹುಲಿಗಳನ್ನು ಗುರುತಿಸಿ, ಅವುಗಳ ಚಲನವಲನವನ್ನು ಅಧ್ಯಯನ ಮಾಡಿದ್ದಾರೆ.

LEAVE A REPLY

Please enter your comment!
Please enter your name here