Home Uncategorized ದೆಹಲಿ ಪ್ರತಿಭಟನೆ: ರೈತ ಸಂಘಟನೆಯ ಏಳು ಬೀಳುಗಳು

ದೆಹಲಿ ಪ್ರತಿಭಟನೆ: ರೈತ ಸಂಘಟನೆಯ ಏಳು ಬೀಳುಗಳು

10
0

ಹೊಸದಿಲ್ಲಿ: ಪಂಜಾಬ್ ರೈತರ ಸಂಘಟನೆ 2020-21ರಲ್ಲಿ ದೆಹಲಿಯ ಹೊರವಲಯದಲ್ಲಿ ತನ್ನ ಬಲಪ್ರದರ್ಶನ ನಡೆಸಿ, ವಿವಾದಿತ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯಲು ಕಾರಣವಾಗಿತ್ತು. ಆ ಬಳಿಕದ ಎರಡು ವರ್ಷಗಳಲ್ಲಿ ರೈತ ಹೋರಾಟ ಮಹತ್ವದ ಬದಲಾವಣೆಗಳನ್ನು ಕಂಡಿದ್ದು, ಕೆಲ ಗುಂಪುಗಳು ಛಿದ್ರವಾಗಿದ್ದರೆ ಮತ್ತೆ ಕೆಲವು ಹೊಸ ಮೈತ್ರಿಕೂಟಗಳು ರಚನೆಗೊಂಡಿವೆ.

2021ರ ಡಿಸೆಂಬರ್ ನಲ್ಲಿ ಕೃಷಿ ಕಾನೂನುಗಳ ರದ್ದತಿ ಬಳಿಕ ರೈತ ಸಂಘಟನೆಗಳ ಲೆಕ್ಕಾಚಾರಗಳು ಕೂಡಾ ಬದಲಾಗಿದ್ದವು. ಕೆಲ ಗುಂಪುಗಳ ನಡುವೆ ಅಭಿಪ್ರಾಯಭೇದ ಕೂಡಾ ಉಂಟಾಗಿದ್ದವು. 2020 ನವೆಂಬರ್ ವೇಳೆಗೆ 32ರಷ್ಟಿದ್ದ ಸಕ್ರಿಯ ರೈತ ಸಂಘಟನೆಗಳ ಸಂಖ್ಯೆ ಇದೀಗ 50ಕ್ಕೇರಿದೆ.

ಇದೀಗ ರೈತ ಸಂಘಟನೆಗಳು ಮತ್ತೊಂದು ಸುತ್ತಿನ ಪ್ರತಿಭಟನೆಗಳನ್ನು ಆರಂಭಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಡಿ ಒಗ್ಗೂಡಿದ್ದ 32 ರೈತ ಸಂಘಟನೆಗಳು ಎಸ್ ಕೆಎಂ (ಪಂಜಾಬ್), ಎಸ್ ಕೆಎಂ (ರಾಜಕೀಯೇತರ), ಕಿಸಾನ್ ಮಜ್ದೂರು ಮೋರ್ಚಾ (ಕೆಎಂಎಂ) ಹೀಗೆ ವಿವಿಧ ಗುಂಪುಗಳಾಗಿ ಛಿದ್ರಗೊಂಡಿವೆ.

ಇದರ ಹೊರತಾಗಿ 2021ರ ಡಿಸೆಂಬರ್ 25ರಂದು ಎಸ್ ಕೆಎಂನ 22 ಸಂಘಟನೆಗಳು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಂಯುಕ್ತ ಸಮಾಜ ಮೋರ್ಚಾ ರಚಿಸಿಕೊಂಡಿದ್ದವು. ಬಲಬೀರ್ ಸಿಂಗ್ ರಾಜೇವಾಲ್ ಅವರು ಎಸ್ಎಸ್ಎಂ ನಾಯಕತ್ವ ವಹಿಸಿದ್ದರು. ಪಂಜಾಬ್ ನ ಪ್ರಮುಖ ಮೂರು ರೈತ ಸಂಘಟನೆಗಳಾದ ಬಿಕೆಯು (ಏಕತಾ ಉಗ್ರಹಾನ್), ಕೆಬಿಯು (ಏಕತಾ ಸಿಧುಪುರ), ಬಿಕೆಯು (ಏಕತಾ ದಕುಂದಾ) ಎಸ್ಎಸ್ಎಂನಿಂದ ದೂರ ಉಳಿದಿದ್ದವು.

ಆದರೆ ಎಸ್ಎಸ್ಎಂ ಉಗಮದ ಬಳಿಕ ಕೆಲ ಸಂಘಟನೆಗಳು ಇದರಿಂದ ವಿಮುಖವಾದವು. ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ತಿರುಗುಬಾಣವಾದ ಹಿನ್ನೆಲೆಯಲ್ಲಿ ಎಸ್ಎಸ್ಎಂ ತನ್ನ ವೇಗ ಕಳೆದುಕೊಂಡು, ಐದು ಗುಂಪುಗಳಾಗಿ ವಿಭಜನೆಯಾಯಿತು. ರಾಜೇವಾಲ್ ನೇತೃತ್ವದ ಬಣ ಎಸ್ ಕೆಎಂನಲ್ಲಿ ಕಳೆದ 15ರಂದು ವಿಲೀನವಾಯಿತು.

LEAVE A REPLY

Please enter your comment!
Please enter your name here