Home Uncategorized ದೇಶಕ್ಕೆ ಇಬ್ಬರು ರಾಷ್ಟ್ರಪಿತ, ಮೋದಿ ಜೀ ನವ ಭಾರತದ ರಾಷ್ಟ್ರಪಿತ ಎಂದ ದೇವೇಂದ್ರ ಫಡ್ನವೀಸ್ ಪತ್ನಿ...

ದೇಶಕ್ಕೆ ಇಬ್ಬರು ರಾಷ್ಟ್ರಪಿತ, ಮೋದಿ ಜೀ ನವ ಭಾರತದ ರಾಷ್ಟ್ರಪಿತ ಎಂದ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ

4
0
Advertisement
bengaluru

ನಾಗ್ಪುರ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವೀಸ್ (Amruta Fadnavis) ಅವರು ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) “ರಾಷ್ಟ್ರಪಿತ” ಎಂದಿದ್ದಾರೆ. ಈ ವಾರ ನಾಗ್ಪುರದಲ್ಲಿ ಬರಹಗಾರರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ನಡೆದ ಸಂದರ್ಶನದಲ್ಲಿ, ಪ್ರಧಾನಿ ಮೋದಿಯನ್ನು “ರಾಷ್ಟ್ರಪಿತ” ಎಂದು ಹೇಳಿದ ಅವರಲ್ಲಿ ಹಾಗಾದರೆ ಮಹಾತ್ಮ ಗಾಂಧಿ ಯಾರು ಎಂದು ಕೇಳಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರಪಿತ ಆದರೆ ಮೋದಿ ಜೀ ನವ ಭಾರತದ ಪಿತ. ನಮ್ಮ ದೇಶಕ್ಕೆ ಎರಡು ರಾಷ್ಟ್ರಪಿತ ಇದ್ದಾರೆ . ಒಂದು ಈ ಯುಗದ್ದು ಇನ್ನೊಂದು ಆ ಯುಗದ್ದು ಎಂದು ಅಮೃತಾ ಮರಾಠಿಯಲ್ಲಿ ಹೇಳಿದ್ದಾರೆ. ಅಂದಹಾಗೆ ಅಮೃತಾ ಅವರು ನರೇಂದ್ರ ಮೋದಿಯವರನ್ನು ಹೀಗೆ ಬಣ್ಣಿಸಿದ್ದು ಇದೇ ಮೊದಲಲ್ಲ. 2019 ರಲ್ಲಿ ಅಮೃತಾ ಅವರು ನಮ್ಮ ರಾಷ್ಟ್ರಪಿತ  ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು – ಅವರು ಸಮಾಜದ ಒಳಿತಿಗಾಗಿ ಪಟ್ಟುಬಿಡದೆ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತಾರೆ ಎಂದು ಮೋದಿಗೆ ಶುಭಾಶಯ ಕೋರಿದ್ದರು.

Wishing the Father of our Country @narendramodi ji a very Happy Birthday – who inspires us to work relentlessly towards the betterment of the society ! #HappyBDayPMModiJi #HappyBdayPMModi #HappyBirthdayPM #happybirthdaynarendramodi pic.twitter.com/Ji2OMDmRSm

— AMRUTA FADNAVIS (@fadnavis_amruta) September 17, 2019

ತನ್ನ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಮತ್ತು ಸಾರ್ವಜನಿಕ ಹೇಳಿಕೆಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಅಮೃತಾ ಫಡ್ನವಿಸ್ ಈ ವರ್ಷದ ಆರಂಭದಲ್ಲಿ ಶಿವಸೇನಾ ದಂಗೆಯ ನಡುವೆ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧವೂ ಟೀಕಾ ಪ್ರಹಾರ ಮಾಡಿದ್ದರು. “ಏಕ್ ‘ಥಾ’ ಕಪಟಿ ರಾಜಾ… (ಒಬ್ಬ ದುಷ್ಟ ರಾಜನಿದ್ದ)” ಎಂದು ಟ್ವೀಟ್‌ ಮಾಡಿದ್ದ ಅವರು ನಂತರ ಅದನ್ನು ಅಳಿಸಿ ಹಾಕಿದ್ದರು. ಆಕೆಯ “ರಾಜ”ನ ಉಲ್ಲೇಖ ಮತ್ತು ‘ಥಾ’ (‘ಆಗಿದ್ದರು’) ಎಂಬುದು ಠಾಕ್ರೆಯನ್ನು ಉದ್ದೇಶಿಸಿಯೇ ಆಗಿತ್ತು ಎಂಬುದು ಚರ್ಚೆಯಾಗಿತ್ತು.

bengaluru bengaluru

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here