ಮಂಗಳೂರು, ಜ.4: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಎರಡನೇ ದಿನವಾದ ಗುರುವಾರವೂ ಮಳೆಯಾಗುತ್ತಿದೆ.
ಮಂಗಳೂರು ನಗರದಲ್ಲಿ ರಾತ್ರಿಯಿಂದಲೇ ಮೋಡ ಕವಿದ ವಾತಾವರಣವಿದ್ದು, ಬೆಳಗ್ಗೆ 7:30ರ ಸುಮಾರಿಗೆ ಮಳೆ ಆರಂಭಗೊಂಡಿದೆ. ನಾಲ್ಕುಗಂಟೆಗಳಿಂದಲೂ ಮಳೆ ಸುರಿಯುತ್ತಿದ್ದು, ಇನ್ನೂ ಮುಂದುವರಿದಿದೆ.
ಉಳ್ಳಾಲ, ಕೊಣಾಜೆ, ಮುಡಿಪು ಸೇರಿದಂತೆ ನಗರ ಹೊರವಲಯದಲ್ಲೂ ಸಾಧಾರಣ ಮಳೆಯಾಗುತ್ತಿದೆ.
ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ಬೆಳಗ್ಗೆಯಿಂದ ತುಂತುರು ಮಳೆ ಸುರಿಯುತ್ತಿದೆ.