Home Uncategorized ಧಾರ್ಮಿಕ ಮತಾಂತರಕ್ಕೆ ಒತ್ತಾಯ, ನಿರಾಕರಿಸಿದ್ದಕ್ಕೆ ತಾಯಿ-ಮಗನ ಮೇಲೆ ಹಲ್ಲೆ: ದೂರು ದಾಖಲು

ಧಾರ್ಮಿಕ ಮತಾಂತರಕ್ಕೆ ಒತ್ತಾಯ, ನಿರಾಕರಿಸಿದ್ದಕ್ಕೆ ತಾಯಿ-ಮಗನ ಮೇಲೆ ಹಲ್ಲೆ: ದೂರು ದಾಖಲು

5
0
bengaluru

ಬೇರೊಂದು ಧರ್ಮಕ್ಕೆ ಮತಾಂತರಗೊಳ್ಳಲು ವಿರೋಧಿಸಿದ್ದಕ್ಕೆ ತಮ್ಮ ಮತ್ತು ಮಗನ ಮೇಲೆ ಹಲ್ಲೆ ನಡೆಸಿರುವುದಾಗಿ 32 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜಿಗಣಿಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು: ಬೇರೊಂದು ಧರ್ಮಕ್ಕೆ ಮತಾಂತರಗೊಳ್ಳಲು ವಿರೋಧಿಸಿದ್ದಕ್ಕೆ ತಮ್ಮ ಮತ್ತು ಮಗನ ಮೇಲೆ ಹಲ್ಲೆ ನಡೆಸಿರುವುದಾಗಿ 32 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜಿಗಣಿಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಡಿಸೆಂಬರ್ 22 ರಂದು ಸಂತ್ರಸ್ತೆ ತನ್ನ ತಾಯಿಯನ್ನು ಕಳೆದುಕೊಂಡರು. ನಂತರ, ದಂಪತಿ ಆಕೆಯನ್ನು ಮತಾಂತರಗೊಳ್ಳುವಂತೆ ಕೇಳಿಕೊಂಡರು. ಇದರಿಂದ ಆಕೆಗೆ ಅನೇಕ ಪ್ರಯೋಜನಗಳಿವೆ ಮತ್ತು ಆಕೆಯ ಕುಟುಂಬವನ್ನು ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಮಂಗಳವಾರ, ದಂಪತಿಯ ಕಿರಾಣಿ ಅಂಗಡಿಗೆ ಸಂತ್ರಸ್ತೆಯ ಒಂಬತ್ತು ವರ್ಷದ ಮಗಳ ತೆರಳಿದ್ದಾಗ ನಂತರ ಅಳುತ್ತಾ ಮನೆಗೆ ಮರಳಿದ್ದಾನೆ. ಮಹಿಳೆ ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಮತಾಂತರದ ಬಗ್ಗೆ ತಮ್ಮ ಸಲಹೆಯನ್ನು ಕೇಳದ ಕಾರಣ ದಂಪತಿ ಆಕೆಯನ್ನು ಕೂಡ ತಮ್ಮ ಮನೆಯ ಕಾಂಪೌಂಡ್‌ಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದವರು ಜಿಗಣಿಯ ಕನ್ನಾಯಕನ ಅಗ್ರಹಾರ ನಿವಾಸಿಗಳಾಗಿದ್ದು, ಅವರ ನೆರೆಹೊರೆಯಲ್ಲಿ ವಾಸವಾಗಿರುವ ದಂಪತಿ ವಿರುದ್ಧ ಬನ್ನೇರುಘಟ್ಟ ಪೊಲೀಸರು ಮಂಗಳವಾರ ದೂರು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ಮಗನು ತಮ್ಮ ಅಂಗಡಿಗೆ ಹೋದಾಗ ದಂಪತಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

bengaluru

ಇದನ್ನೂ ಓದಿ: ಬಲವಂತದ ಧಾರ್ಮಿಕ ಮತಾಂತರ, ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಕೊಪ್ಪಳದ ಪಾದ್ರಿಯ ವಿರುದ್ಧ ಎಫ್ ಐ ಆರ್

‘ನನ್ನ ತಾಯಿಯ ಮರಣಾ ನಂತರದ ಆಚರಣೆಗಳು ಇನ್ನೂ ಮುಗಿದಿಲ್ಲ. ನಾನು ಆಳವಾದ ನೋವಿನಲ್ಲಿದ್ದೇನೆ. ದಂಪತಿ ನನ್ನನ್ನು ಮತಾಂತರಗೊಳ್ಳುವಂತೆ ಕೇಳಿಕೊಂಡರು. ನಾನು ನಿರಾಕರಿಸಿದಾಗ, ಅವರು ನನ್ನನ್ನು ಮತ್ತು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ನನ್ನ ತಲೆಯನ್ನು ಗೋಡೆಗೆ ಬಡಿದರು. ನನ್ನ ಗಾಯಗಳಿಗೆ ನಾನು ಚಿಕಿತ್ಸೆ ತೆಗೆದುಕೊಂಡಿದ್ದೇನೆ’ ಎಂದು ಸಂತ್ರಸ್ತೆ ಟಿಎನ್ಐಇಗೆ ತಿಳಿಸದ್ದಾರೆ.

ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸುವ ಮೊದಲು, ದಂಪತಿ ಪೊಲೀಸರನ್ನು ಸಂಪರ್ಕಿಸಿ ಆಕೆಯ ವಿರುದ್ಧವೇ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಯಾವುದೇ ದೂರು ದಾಖಲಾಗಿಲ್ಲ. ‘ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಶಂಕಿತರ ವಿರುದ್ಧ ಮಾಡಿರುವ ಆರೋಪಗಳಿಗೆ ಯಾವುದೇ ಪುರಾವೆ ಇಲ್ಲ. ದೂರುದಾರರನ್ನು ಮತಾಂತರಗೊಳ್ಳುವಂತೆ ಕೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶಂಕಿತರ ವಿರುದ್ಧ ಇತರ ಐಪಿಸಿ ಸೆಕ್ಷನ್‌ಗಳೊಂದಿಗೆ ಪ್ರಕರಣ ದಾಖಲಿಸಲಾಗಿದೆ.

bengaluru

LEAVE A REPLY

Please enter your comment!
Please enter your name here