Home ಅಪರಾಧ ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ

ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ

26
0
ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ: ನಾಲ್ವರು ಸಿಐಡಿ ವಶಕ್ಕೆ
Advertisement
bengaluru

ಬೆಂಗಳೂರು:

ಹಿರಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ಫೇಸ್‍ಬುಕ್ ಪ್ರೊಫೈಲ್‍ ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸಿದ್ದ ನಾಲ್ವರನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅನ್ಸರ್, ಬಲ್ವಿಂದರ್ ಸಿಂಗ್, ಸೈನಿ ಹಾಗೂ ಸದ್ದಾಂ ಬಂಧಿತ ಆರೋಪಿಗಳು. ಫೇಸ್‍ಬುಕ್ ಖಾತೆಗಳನ್ನು ಸೃಷ್ಟಿಸಿದ್ದ ಮತ್ತೋರ್ವ ಆರೋಪಿ ಶಕೀಲ್ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ಪೊಲೀಸ್, ಸರ್ಕಾರಿ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ನಕಲಿ ಪ್ರೊಫೈಲ್‍ಗಳ ಮೂಲಕ ಸ್ನೇಹಕ್ಕಾಗಿ ಮನವಿ ಸಲ್ಲಿಸಿ ಅದನ್ನು ಸ್ವೀಕರಿಸಿದ ವ್ಯಕ್ತಿಗಳೊಂದಿಗೆ ಸಂಬಂಧಪಟ್ಟ ಗಣ್ಯರು ಮತ್ತು ಅಧಿಕಾರಿಗಳ ಸೋಗಿನಲ್ಲಿ ಸಂವಹನ ನಡೆಸಿ ತುರ್ತು ಕಾರಣ ಎಂದು ಹೇಳಿ ಅವರಿಗೆ ನಂಬಿಕೆ ಬರುವಂತೆ ಮಾಡಿ ಹಣ ಪಡೆದು ವಂಚಿಸುತ್ತಿದ್ದರು.

bengaluru bengaluru

ಆರೋಪಿಗಳು ನಕಲಿ ಸಿಮ್ ಕಾರ್ಡ್ ಗಳನ್ನು ಬಳಸಿ ನಕಲಿ ಸಾಮಾಜಿಕ ಜಾಲತಾಣ ಸೃಷ್ಟಿಸುವುದಲ್ಲದೇ ಆನ್‍ಲೈನ್ ಮರು ಮಾರಾಟ ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಲು, ವಂಚನೆ ಮಾಡುವ ಸಲುವಾಗಿ ಇ-ವ್ಯಾಲೆಟ್‍ಗಳು ಮತ್ತು ಪೇಮೆಂಟ್ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸುವುದು ಹಾಗೂ ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್‍ಲೈನ್ ಹಣಕಾಸು ವಂಚನೆಗಳನ್ನು ಎಸಗಲು ಉಪಯೋಗಿಸುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಆಧಾರ್ ಕಾರ್ಡ್‍ಗಳನ್ನು ದುರುಪಯೋಗಪಡಿಸಿಕೊಳ್ಳುವ ಹಾಗೂ ಹೊಸ ಮೊಬೈಲ್ ಸಂಪರ್ಕಗಳನ್ನು ಆಕ್ಟಿವೇಟ್ ಮಾಡುವ ಸಮಯದಲ್ಲಿ ಮೊಬೈಲ್ ಸೇವಾದಾರರು ಪರಿಶೀಲನಾ ಪ್ರಕ್ರಿಯೆಯಲ್ಲಿ ಗಂಭೀರ ನಿರ್ಲಕ್ಷ್ಯ ತೋರುತ್ತಿರುವುದು ತನಿಖೆಯಿಂದ ಕಂಡು ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿರುವ ಗಣ್ಯರು ಮತ್ತು ಸರ್ಕಾರಿ ಅಧಿಕಾರಿಗಳ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಸ್ನೇಹದ ಮನವಿ ಬಂದಲ್ಲಿ ಅವುಗಳನ್ನು ಸ್ವೀಕರಿಸುವ ಮುಂಚೆ ಎಚ್ಚರಿಕೆ ವಹಿಸಿ ಇಂತಹ ವಂಚನೆಗಳಿಗೆ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಖಾತೆಗಳಲ್ಲಿನ ಮಾಹಿತಿಗಳು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಇಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಸಾರ್ವಜನಿಕರು ಮಾಹಿತಿಯನ್ನು ಸೈಬರ್ ಅಪರಾಧ ವಿಭಾಗ, ಸಿಐಡಿ ಅಥವಾ ದೂ. ಸಂಖ್ಯೆ 080- 22094601 ಸಂಪರ್ಕಿಸಬೇಕು ಎಂದು ಕೋರಿದ್ದಾರೆ.


bengaluru

LEAVE A REPLY

Please enter your comment!
Please enter your name here